1981 ಹೋರಾಟ ಮತ್ತೆ ಮರುಕಳಿಸುತ್ತದೆ : ವಿಜಯ ಕುಲಕರ್ಣಿ ಎಚ್ಚರಿಕೆ

0

ನರಗುಂದ : ಕಳಸಾ – ಬಂಡೂರಿ ಯೋಜನೆ ಶೀಘ್ರವಾಗಿ ಪ್ರಾರಂಭ ಮಾಡದೆ ಹೋದರೆ 1981 ರ ಹೋರಾಟ ದಿನಗಳು ಮತ್ತೆ ಮರುಕಳಿಸುತ್ತದೆ ಎಂದು ಕಳಸಾ -ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಎಚ್ಚರಿಕೆ ನೀಡಿದರು.

ಜಿಲ್ಲೆಯ ನರಗುಂದ  ಪಟ್ಟಣದಲ್ಲಿ  81ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ  ಹುತಾತ್ಮರಾದ ರೈತ ಈರಪ್ಪ ಕೊಡ್ಲಿಕೊಪ್ಪ ಹಾಗೂ ಪೋಲಿಸ್ ಸಿಬ್ಬಂದಿಗಳ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಕೇವಲ 7.5 ಟಿಎಂಸಿ ನೀರು ಕೊಡಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ರಾಜಕೀಯ ಪಕ್ಷಗಳು ಮೀನಾಮೇಷ  ಮಾಡುತ್ತ ಕಾಲ ಹರಣ ಮಾಡುತ್ತಿದ್ದಾರೆ ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದ್ದಾರೆ ಕಿಡಿಕಾರಿದರು.

ಸರ್ಕಾರಕ್ಕೆ ನಮ್ಮ ಮತ ಬೇಕು, ಚುನಾವಣೆ ಬಂದಾಗ ಮಾತ್ರ ನಾವು ಅವರಿಗೆ ನೆನಪಾಗುತ್ತೇವೆ ನೀರಿಗಾಗಿ ನಡೆಯುತ್ತಿರುವ ಹೋರಾಟ ರ‍್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಇನ್ನು ಮುಂದೆ ರೈತರು ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಕಟ್ಟ ಬಾರದು ಎಲ್ಲಿಯವರೆಗೆ ಸರ್ಕಾರ ನೀರು ಕೊಡುವುದಿಲ್ಲವೋ ಅಲ್ಲಿಯವರೆಗೆ ಯಾಒಬ್ಬ ರೈತರು ತಮ್ಮ ಸಾಲವನ್ನು ಮರು ಪಾವತಿಸಲು ಹೋಗಬೇಡಿ ಎಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆಗಳನ್ನು ರೈತರೊಂದಿಗೆ ಕೂಡಿಕೊಂಡು ಸಭೆ ನಡೆಸಿ ನರ‍್ಧಾರ ತೆಗೆದುಕೊಳ್ಳುತ್ತೆವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರುಣ ಹೊಂಬಳ, ಆನಂದ ಗವಳಿ, ರವಿ ಜಂತ್ಲಿ, ರಮೇಶ ಮಡಿವಾಳರ, ವಿಶಾಲ ಮುಂಡರಗಿ, ವಿಜಯ ಪೋತಿನ, ನಾಗೇಶ ಅಪ್ಪೋಜಿ, ರುದ್ರಗೌಡ ಚಿನ್ನಪ್ಪಗೌಡ, ರುದ್ರಗೌಡ ರಾಚನಗೌಡ್ರ, ಮಹಾದೇವಪ್ಪ ತಡಾಳ, ಅನಿಲ ಕಡ್ಲಿಕೊಪ್ಪ, ಜಿ ಆರ್ ತಿಮ್ಮರೆಡ್ಡಿ, ಡಾ.ಶೀವಯೋಗಿ ಹೀರೆಮಠ, ಶಂಕ್ರಪ್ಪ ಯರಗಟ್ಟಿ ಹಾಗು ರೈತರು ಉಪಸ್ಥಿತರಿದ್ದರು.////

ಕಳೆದ ೪೦ ವರ್ಷಗಳಿಂದ ಹುತಾತ್ಮ ರೈತ ಹೋರಾಟದ ಮಾದರಿ ಮತ್ತೆ ನರಗುಂದದಲ್ಲಿ ಮುಂದಿನ  ದಿನಗಳಲ್ಲಿ ಕಳಸಾ-ಬಂಡೂರಿ ನೀರಿಗಾಗಿ ನಡೆದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಕಾರಣ. ಕೂಡಲೇ  ಸರ್ಕಾರ ಎಚ್ಚೆತ್ತು ಗೋವಾ ಸರ್ಕಾರದೊಂದಿಗೆ ಮಾತುಕಥೆ ನಡೆಸಿ ಕಳಸಾ-ಬಂಡೂರಿ ನಾಲೆಗಳಿಗೆ ನೀರು ಹರಿಸಬೇಕು.

– ವಸಂತ ಪಡಗದ
ಜಿಲ್ಲಾ ಅಧ್ಯಕ್ಷ ಕಳಸಾ-ಬಂಡೂರಿ ಹೋರಾಟ ಸಮಿತಿ ಗದಗ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');