41ನೇ ರೈತ ಹುತಾತ್ಮ ದಿನಾಚರಣೆಯನ್ನು ಬಾಬಾಗೌಡ ಪಾಟೀಲ ಅಭಿಮಾನಿ ಬಳಗದಿಂದ ಆಚರಿಸಲಾಯಿತು.

0

ಚಿಕ್ಕಬಾಗೇವಾಡಿಯ ಮಾಜಿ ಕೇಂದ್ರ ಸಚಿವ ಬಾಬಾಗೌಡ್ರು ಪಾಟೀಲ ಸಭಾ ಭವನದಲ್ಲಿ 41ನೇ ರೈತ ಹುತಾತ್ಮ ದಿನಾಚರಣೆಯನ್ನು ಬಾಬಾಗೌಡ ಪಾಟೀಲ ಅಭಿಮಾನಿ ಬಳಗದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಾವೇರಿಯ ಸಿದ್ದನಗೌಡ ಪಾಟೀಲ ಮಾತನಾಡಿ
1974 ರಿಂದ 1980 ರವರೆಗೆ ಸತತ 6 ವರ್ಷದ ಬರಗಾಲ ಬಿದ್ದಾಗಲೂ ಸಹ ಸರಕಾರವು ರೈತರಿಂದ ನೀರಾವರಿ ಕರ, ಬೆಟರಮೆಂಟ್ ಲೆವಿ ಹಾಗು ಸುಸ್ತಿ ಬಡ್ಡಿ ವಸೂಲಿಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ಅಧಿಕಾರಿಗಳು ರೈತರ ಮನೆಮನೆಗೆ ನುಗ್ಗಿ ಅಲ್ಲಿಯ ಪಾತ್ರೆ- ಪಗಡೆ,ರಂಟೆ- ಕುಂಟಿಗಳನ್ನು ಜಪ್ತ ಮಾಡತೊಡಗಿದರು. ಇದರ ವಿರುದ್ಧ ನವಲಗುಂದ, ನರಗುಂದ,ಸವದತ್ತಿ,ರಾಮದುರ್ಗ ತಾಲೂಕುಗಳ ರೈತರು 1980 ಮಾರ್ಚ್ 1 ರಂದು ನವಲಗುಂದ ತಾಲೂಕಿನ ಅಳಗವಾಡಿ ಎನ್ನುವ ಹಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿದರು. ಈ ಸಭೆಯಲ್ಲಿ ಮಲಪ್ರಭಾ ಪ್ರದೇಶ ರೈತ ಸಮನ್ವಯ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿಗೆ ಮನವಿ ಕೊಡಲು
ಹೋದರು ಕ್ಯಾರೆ ಮಾಡಲಿಲ್ಲ ಹಾಗೂ ಮನವಿಕಾರ ರೈತರನ್ನು ಭೇಟಿಯಾಗುವ ಸೌಜನ್ಯವನ್ನೂ ತೋರಲಿಲ್ಲ. ಜಿಲ್ಲಾಧಿಕಾರಿ ರೈತರನ್ನು ಬೈದು ಕಳುಹಿಸಿದರು. ಇದೆಲ್ಲದರ ಪರಿಣಾಮವಾಗಿ ಜುಲೈ 21 ರಂದು ನವಲಗುಂದ, ನರಗುಂದ, ಸವದತ್ತಿ ಹಾಗು ರಾಮದುರ್ಗ ತಾಲೂಕುಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತಿದ್ದರು. ಆ ವೇಳೆ ಪೋಲಿಸರ ಗುಂಡೇಟಿಗೆ ರೈತರನ್ನು ತುಳಿದುಕೊಂಡೇ ಕಚೇರಿಯ ಒಳಗೆ ನಡೆದರು. ಅದೆ ವೇಳೆಗೆ ಪಿ.ಎಸ್.ಐ. ರೈತರ ಮೇಲೆ ಗುಂಡು ಹಾರಿಸಿದರು.ಗುಂಡೇಟಿಗೆ ಈರಪ್ಪ ಕಡ್ಲಿಕೊಪ್ಪ  ಮತ್ತು ಬಸಪ್ಪ ಲಕ್ಕುಂಡಿ ಎನ್ನುವ ರೈತರು ಬಲಿಯಾದರು.
ಮರುದಿನವೇ ಪ್ರಾರಂಭವಾದದ್ದು ಸರಕಾರದ ಪ್ರತೀಕಾರ ಕಾಂಡ. ನವಲಗುಂದ, ನರಗುಂದದಲ್ಲಿ ಹತ್ತಿದ ಬೆಂಕಿ ಇಡೀ ರ್ನಾಟಕವನ್ನೇ ವ್ಯಾಪಿಸಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆ ಹಾಗು ಪ್ರತಿಯಾಗಿ ನಡೆದ ಗೋಳೀಬಾರುಗಳಲ್ಲಿ 139 ರೈತರು ಬಲಿಯಾದರು. ಇವರ ಸ್ಮಣಾರ್ಥವಾಗಿ ಪ್ರತಿವರ್ಷ ಜುಲೈ 21ರಂದು ರೈತ ಹುತಾತ್ಮ ದಿನಾಚರಣೆ ಆಚರಿಸುತ್ತೇವೆ ಎಂದರು.
ನವಲಗುಂದ ಪಟ್ಟಣದಲ್ಲಿ ರೈತ ಹುತಾತ್ಮ ದಿನದ ಅಂಗವಾಗಿ ದಿವಂಗತ ಬಾಬಾಗೌಡ್ರು ಪಾಟೀಲರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಮಾತನಾಡಿದ ಹೈಕೋರ್ಟ್ ನ್ಯಾಯವಾದಿ ಪಿ.ಎಚ್. ನೀರಲಕೇರಿ ಮಾಜಿ ಕೇಂದ್ರ ಸಚಿವ ಬಾಬಾಗೌಡ್ರು ಪಾಟೀಲ ನಿಧನ ಹೊಂದಿದಾಗ ಸರಕಾರ ಯಾವುದೇ ರೀತಿ ಗೌರವ ನೀಡದೇ ಇರುವುದನ್ನು ಖಂಡಿಸಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಹರಿಹಾಯ್ದರು.
ಕೇಂದ್ರದ ಮಾಜಿ ಸಚಿವ, ರೈತ ಮುಖಂಡ
ಬಾಬಾಗೌಡ ಪಾಟೀಲ ಅವರ ರೈತ ಕುಲದ ಪರ ವಿಚಾರಗಳ ಚಿಂತನೆ, ಹೋರಾಟದ ನೆನಪುಗಳು ಅವಿಸ್ಮರಣೀಯ ಎಂದು ರೈತ ಮುಖಂಡ,ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹೇಳಿ,
ಈಗ ರಾಜ್ಯದಲ್ಲಿ ನಡೆದಿರುವ ರಾಜಕೀಯ ಪಕ್ಷಗಳ ನಡೆ ಮತ್ತು ಆಡಳಿತ ನಡೆಸುತ್ತಿರುವ ವ್ಯವಸ್ಥೆ ನೋಡಿದರೆ ನಿಜವಾಗಿಯೂ ಜನ ಸಾಮಾನ್ಯರ ಬದುಕು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಬಾಬಾಗೌಡರ ಆಗಾಗ ಹೇಳುತ್ತಿದ್ದರು. ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣ ಬರಬಹುದೆ?, ಜನತಾ ಪರಿವಾರದಲ್ಲಿದ್ದಂತಹ ನಾಯಕರು ರಾಜಕಾರಣದಲ್ಲಿ ಸಿಗಬಹುದೇ ಎಂದು ಪ್ರಶ್ನಿಸಿರುವ ನೀರಲಕೇರಿ, ರಾಷ್ಟ್ರ ನಾಯಕ ಎಸ್.ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲರು ,ರಾಮಕೃಷ್ಣ ಹೆಗಡೆ, ಅಬ್ದುಲ ನಜೀರಸಾಬ ,ಜೆ.ಎಚ್. ಪಟೇಲ್ ಅವರಂತಹ ಮುತ್ಸದ್ಧಿಗಳು ಹಾಗೂ ರೈತ ಚಳುವಳಿಯ ಬಾಬಾಗೌಡ ಪಾಟೀಲರು, ಪ್ರೊ,ಎಂ.ಡಿ.ನಂಜುಂಡಸ್ವಾಮಿ ಅವರಂತಹ ಹೋರಾಟಗಾರರ ವಿಚಾರಧಾರೆಗಳನ್ನು ಹೊಂದಿರುವ ನಾಯಕರು ಮತ್ತೆ ಈ ರಾಜ್ಯದಲ್ಲಿ ಮುಂಚೂಣಿಗೆ ಬರಬಹುದೇ.
ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾನೂನುಗಳು, ವಿದ್ಯುತ್ ಖಾಸಗೀಕರಣ ನೀತಿ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ, ಕಳಸಾ-ಬಂಡೂರಿ ಕಾಮಗಾರಿ ವಿಳಂಬ, ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಹಾಗೂ ಪ್ರಸಕ್ತ ಕಬ್ಬು ದರ ನಿಗದಿ ಇತ್ಯಾದಿ ಸಮಸ್ಯೆಗಳ ಕುರಿತು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ನಡೆಸಬೇಕು ಹಾಗೂ ಬೆಳಗಾವಿ ಸುವರ್ಣ ಸೌಧದ ಎದುರು ದಿವಗಂತ ಬಾಬಾಗೌಡ ಪಾಟೀಲರ ಪುತಳಿ ನೀರ್ಮಿಸಬೇಕೆಂದು ನೀರಲಕೇರಿ ಆಗ್ರಹಿಸಿದರು.
ಇದೇ ವೇಳೆ ಬಾಬಾಗೌಡ್ರು ಪಾಟೀಲರಿಗೆ ಎಲ್ಲ ರೈತ ಭಾಂದವರು ನುಡಿನಮನ ಸಲ್ಲಿಸಿದರು. ಈ ನುಡಿನಮನ ಕಾರ್ಯಕ್ಕೆ ಶಿಕ್ಷರಾದ ಬಸಪ್ಪ ಶೀಗಿಹಳ್ಳಿ ಹಾಗೂ ಚಂದ್ರಗೌಡ ಪಾಟೀಲ ಕವನ ವಾಚನ ಮಾಡಿದರು. ಸಿದ್ದಣ್ಣ ಕಂಬಾರ ಹಾಗೂ ನಿವೃತ್ತ ಶಿಕ್ಷಕ ಎಸ್ ಬಿ ಕರಿಲಿಂಗಣ್ಣವರ ಮಾತನಾಡಿದರು.
ರೈತ ಮುಖಂಡರಾದ ನೀಲಾಂಬಿಕಾ ಬಾಬಾಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಈಶಪ್ರಭು ಪಾಟೀಲ, ಸಿದ್ದನಗೌಡ ಪಾಟೀಲ. ನಾಗಯ್ಯ ಪೂಜೇರ,ಅಪ್ಪೇಶಿ ದಳವಾಯಿ, ಮಹೇಶ ಕೊಟುರ,ಪ್ರಕಾಶ ಭಾಲ್ಕಿ, ಶಂಕರೇಪ್ಪ ಯಡಳ್ಳಿ,ಮಾನಸಿಂಗ ರಜಪೂತ, ಸಂಗಮೇಶ ವಾಲಿ , ಮಲ್ಲನಾಯ್ಕ ಭಾಂವಿ,ಗಣಪತಿ ನೇಗಿನಹಾಳ,ದ್ಯಾಮನಗೌಡ ಪಾಟೀಲ, ರವಿ ಪಾರಿಶ್ವಾಡ, ರವಿಂದ್ರ ಪಟ್ಟಣಶೆಟ್ಟಿ, ಆನಂದ ಹಂಪಣ್ಣವರ,.ಸುಭಾಸಚಂದ್ರಗೌಡ ಪಾಟೀಲ, ಅರ್ಜುನ ಪಡೆಣ್ಣವರ ಶ್ರೀಶೈಲಗೌಡ ಕಮತರ ,ಕಲ್ಲಗೌಡ ಪಾಟೀಲ, ಬಸವರಾಜ ಡೊಂಗರಗಾಂವಿ ಸಂತೋಷ ಸಂಬಣ್ಣವರ ಸೇರಿದಂತೆ ರೈತ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಗಜಾನಂದ ಸೊಗಲನ್ನವರ ಕಾರ್ಯಕ್ರಮ ನಿರ್ವಹಣೆ ಮಾಡಿದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');