ಜುಲೈ 26ಕ್ಕೆ ನನ್ನ ಕೆಲಸ ನಾನು ಮಾಡುವೆ- ಮೊದಲ ಬಾರಿಗೆ ರಾಜೀನಾಮೆ ಸುಳಿವು ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ

0

ಬೆಂಗಳೂರು:  ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ನಾಯಕತ್ವ ಬದಲಾವಣೆ ವಿಚಾರ ಚರ್ಚಿಯಲ್ಲಿದ್ದು,  ಈ ನಡುವೆ ಮೊದಲ ಬಾರಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆಯ ಸುಳಿವು ಕೊಟ್ಟಿದ್ದಾರೆ.

ಬೆಂಗಳೂರಿನ ಕಾಚರಕನಹಳ್ಳಿಯ ಕೋದಂಡರಾಮಸ್ವಾಮಿ ದೇವಾಸ್ಥಾನದಲ್ಲಿ ನಡೆದ ದನ್ವಂತರಿಯಾಗದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿಯ ಪಕ್ಷ ಬಲಪಡಿಸೋದೆ ನನ್ನ ಸಂಕಲ್ಪ. ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿ.   ಹೈಕಮಾಂಡ್ ನನ್ನ ಕೆಲಸವನ್ನ ಮೆಚ್ಚಿಕೊಂಡಿದೆ.  ಪ್ರಧಾನಿ ಮೋದಿ ಅಮಿತ್ ಶಾ ನನಗೆ ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅದಿಕಾರ ಕೊಡಲ್ಲ. ಆದರೆ ನನ್ನ ಕೆಲಸ ಮೆಚ್ಚಿ ಅಧಿಕಾರ ನೀಡಿದ್ದಾರೆ ಎಂದರು.

ಹೈಕಮಾಂಡ್ ನಿಂದ ಜುಲೈ 25 ರಂದು ಸೂಚನೆ ಬರಲಿದೆ. ರಾಷ್ಟ್ರೀಯ ನಾಯಕರ ಸೂಚನೆಯಂತೆ ನಾನು ಜುಲೈ 25 ರಂದು ನನ್ನ ಕೆಲಸ ಮಾಡುತ್ತೇನೆ. ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ನಡೆಯುತ್ತೇನೆ. ಕೇಂದ್ರ ಏನು ಹೇಳುತ್ತದಯೋ ಆ ತಿರ್ಮಾನ ನನ್ನದು. ಹೈಕಮಾಂಡ್ ತೀರ್ಮಾನವೇ ನನ್ನ ತೀರ್ಮಾನ. ಜುಲೈ 26 ರಂದು ನನ್ನ ಕೆಲಸ ನಾನು ಮಾಡುವೆ ಎಂದರು.

ಜುಲೈ 25 ರಂದು ಸರ್ಕಾರ ಎರಡು ವರ್ಷ ಪೂರೈಸಲಿದೆ. 26ಕ್ಕೆ ಹೈಕಮಾಂಡ್ ಯಾವ ಸಂದೇಶ ಕಳುಹಿಸುತ್ತದೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ. ಬಿಜೆಪಿಯ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು.‌ ರಾಜ್ಯದ ವಿವಿಧ ಮಠಾಧೀಶರು ನನ್ನ ಬಗ್ಗೆ ತೋರಿಸಿದ ವಿಶೇಷ ಕಾಳಜಿಗೆ ಧನ್ಯವಾದಗಳು. ನನ್ನ ಪರವಾಗಿ ಪ್ರತಿಭಟನೆ, ಚಳುವಳಿ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');