112 ಅಗತ್ಯ ಸೇವೆ ಯೋಜನೆಯ ಸಲುವಾಗಿ ಸರಕಾರದ ಬೊಕ್ಕಸದಿಂದ 12,89.79.155  ರೂ.ಗಳನ್ನು ವೆಚ್ಚ : ಮಾಹಿತಿ ಹಕ್ಕಿನಿಂದ ಬಹಿರಂಗ.! ಭೀಮಪ್ಪ ಗಡಾದ

0
🌐 Belgaum News :

ಬೆಳಗಾವಿ: ಸಾರ್ವಜನಿಕರಿಗೆ ಹೆಚ್ಚಿನ ಸುರಕ್ಷತೆ, ಭದ್ರತೆ ಮತ್ತು ತುರ್ತು ಸ್ಪಂದನೆಯ ಸಲುವಾಗಿ ಪೋಲಿಸ್ ಇಲಾಖೆಯಿಂದ ಹೊಸದಾಗಿ ಪ್ರಾರಂಭಿಸಲಾಗಿರುವ 112 ಅಗತ್ಯ ಸೇವೆ ಯೋಜನೆಯ ಸಲುವಾಗಿ ಸರಕಾರದ ಬೊಕ್ಕಸದಿಂದ 12,89.79.155  ರೂ.ಗಳನ್ನು ವೆಚ್ಚ ಮಾಡಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿರುವದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬೀಮಪ್ಪ ಗಡದಾ ಅವರು ಆರೋಪಿಸಿದ್ದಾರೆ.‌

ಈ ಕುರಿತು ಮಾಹಿತಿ ನೀಡಿರುವ ಅವರು, ಈ ಯೋಜನೆಗೆ ಉಪಯೋಗಿಸುವ ಸಲುವಾಗಿ “ಮಹೇಂದ್ರ ಸ್ಥಾರ್ಪಿಯೋ -ಎಸ್” ಮಾದರಿಯ 114 ವಾಹನಗಳನ್ನು ಖರೀದಿಸಲಾಗಿದ್ದು, ಇರ ಸಲುವಾಗಿ 12.12.79.155 ರೂ.ಗಳನ್ನು ಮತ್ತು 11 “ಬಜಾಜ್ ಪಲ್ಸರ್” ದ್ವಿಚಕ್ರ ವಾಹನಗಳನ್ನು ಖರೀದಿಸಲಾಗಿದ್ದು ಇದರ ಸಲುವಾಗಿ 70.28,898 ರೂ.ಗಳನ್ನು ವೆಚ್ಚ ಮಾಡಿರುವ ಅಂಶವು ಅಧಿಕಾರಿಗಳು ನೀಡಿರುವ ದಾಖಲೆಗಳಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ. ‌

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕರೋನಾ ರೋಗದಿಂದ ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಕುಸಿದು ಹೋಗಿರುವ ಕಾರಣದಿಂದ ಸರಕಾರದಿಂದ ಪಡೆಯುವ ವಿವಿಧ ಮಾಶಾಸನಗಳನ್ನು ಅವಲಂಬಿಸಿಯೇ ಬದುಕು ಸಾಗಿಸುತ್ತಿರುವ ಸಾಕಷ್ಟು ಕುಟುಂಬಗಳು ನಾಲೈದು ತಿಂಗಳು ಕಳೆದರೂ ಖಜಾನೆಯಿಂದ ಮಾಶಾಸನಗಳ ಹಣ ಬಿಡುಗಡೆಯಾಗದೇ ಇರುವುದರಿಂದ ಹೊಟ್ಟೆಗಿಲ್ಲದೇ ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.‌

ಹಣಕಾಸಿನ ಪರಿಸ್ಥಿತಿ ಹೀಗಿರುವಾಗ ಸಾರ್ವಜನಿಕರಿಗೆ ಹೆಚ್ಚಿನ ಭದ್ರತೆ, ಸುರಕ್ಷತೆ ಮತ್ತು ತುರ್ತು ಸೇವೆಯ ಸಲುವಾಗಿ ಎಂದು ಸರಕಾರದ ಬೊಕ್ಕಸದಲ್ಲಿರುವ ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಸೋಲು ಮಾಡುವದು ಎಷ್ಟು ಸರಿ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');