ಧಾರಾಕಾರ ಮಳೆ: ಚಿಕ್ಕೋಡಿ ಜನರಿಗೆ ಶುರುವಾಗಿದೆ ಮತ್ತೆ ಪ್ರವಾಹ ಭೀತಿ

0

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಿನ್ನಲೆ ಗಡಿ ಜಿಲ್ಲೆಯಾದ ಬೆಳಗಾವಿಯ ಜಿಲ್ಲೆಯ ಜನರು ಮತ್ತೆ ಪ್ರವಾಹದ ಭೀತಿಯಲ್ಲಿದ್ದಾರೆ.

ಹೌದು ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಸೇರಿದಂತೆ ಗಡಿಜಿಲ್ಲೆಯ ಭಾಗದ ತಾಲೂಕಗಳಾದ ಚಿಕ್ಕೋಡಿ, ಕಾಗವಾಡ,ರಾಯಭಾಗ ಮತ್ತು ಅಥಣಿ ನಿಪ್ಪಾಣಿ ಭಾಗಗಳಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.

ಅತ್ತ ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಲ್ಲಿ ಕೂಡಾ ನಿರಂತರ ಮಳೆ ಸುರಿಯುತ್ತಿದೆ. ಆದ್ದರಿಂದ ಪ್ರವಾಹದ ಭೀತಿಯನ್ನುಂಟು ಮಾಡುವ ಪ್ರಮುಖ ನದಿ ಕೃಷ್ಣಾ ನದಿ ಈಗ ಎಲ್ಲಡೆ ಮೈದುಂಬಿ ಹರಿಯುತ್ತಿದೆ.

ಆದ್ದರಿಂದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾದ ಮಳೆಗೆ ಕೃಷ್ಣಾ ನದಿಗೆ ಈಗ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ ಇದರಿಂದ ನದಿಯ ಹರಿವು ಹೆಚ್ಚಳವಾಗಿದೆ.  ಮತ್ತು ಅತಿಯಾದ ಮಳೆಗೆ ನದಿ, ಹೊಳೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವದರಿಂದ, ಈಗಾಗಲೇ ಚಿಕ್ಕೋಡಿ ವ್ಯಾಪ್ತಿಯ ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ. ಆದರೆ ಸಂಪರ್ಕಕ್ಕೆ ಸಾರ್ವಜನಿಕರ ಪರ್ಯಾಯ ಮಾರ್ಗದಿಂದ ಸಂಚರಿಸುತ್ತಿದ್ದಾರೆ.

ಇದರ ಜತೆ ಅತ್ತ ಮಹಾರಾಷ್ಟ್ರದ ಕೋಯ್ನಾ,ಕಾಳಮ್ಮವಾಡಿ, ಧೂಮ್,ಮತ್ತು ರಾಧಾನಗರಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿರುವದರಿಂದ, ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ ಮತ್ತು ಕೃಷ್ಣಾ ನದಿಯ ಯಡೂರ ಕಲ್ಲೋಳ, ಭೀವಸಿ-ಜತ್ರಾಟ ,ಅಕ್ಕೋಳ ಸಿದ್ನಾಳ ಸೇರಿದಂತೆ ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ.

ಮಳೆಯಲ್ಲಿ ಹೆಚ್ಚಳವಾಗಿದ್ದರಿಂದ, ಈಗಾಗಲೇ ಜಿಲ್ಲಾಧಿಕಾರಿ ಆದೇಶದಂತೆ ನದಿ ತೀರ ಮತ್ತು ತಟದ ಭಾಗದ ಪ್ರದೇಶದ ಜನರಿಗೆ ನದಿಯ ಕಡೆಗೆ ಹೋಗದಂತೆ ಎಚ್ಚರಿಕೆ ನೀಡಿದೆ. ಮತ್ತು ಇದರ ಜತೆ ಹೆಚ್ಚಿನ ನೀರನ್ನ ಪ್ರವಾಹದ ನಿರ್ವಹಣೆ ನಿಯಮಾವಳಿಗಳನ್ನು ಪಾಲಿಸಿ,  ರಾಜಾಪೂರ ಬ್ಯಾರೇಜ್ ನಿಂದ 58000 ಕ್ಯೂಸೆಕ್ ಮತ್ತು ದೂಧಗಂಗಾ ನದಿಯಿಂದ 19,768 ಕ್ಯೂಸೆಕ್ ನೀರುನ್ನು. ಒಟ್ಟು 77,768 ಕ್ಯೂಸೆಕ್ ನಷ್ಟು ಕೃಷ್ಣಾ ನದಿಗೆ  ಬಿಟ್ಟಿದ್ದಾರೆ. ಇದರ ಜತೆ ಹಿಪ್ಪರಗಿ ಜಲಾಶಯದಿಂದ 74000 ಕ್ಯೂಸೆಕ್ ನಷ್ಟು ನೀರನ್ನು ಕೂಡಾ ಅಧಿಕಾರಿಗಳು ಜಲಾಶಯದಿಂದ ನೀರನ್ನು ಹೊರಗಡೆ ಬೀಡುತ್ತಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');