ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳು ನವದೆಹಲಿ ಶ್ರೀ ಶಂಕರಗೌಡ ಪಾಟೀಲರ 63 ನೇ ಜನ್ಮದಿನವನ್ನು ಬೆಳಗಾವಿ ನಗರದಲ್ಲಿ ಸರಳವಾಗಿ ಆಚರಿಸಲಾಯಿತು.

0
🌐 Belgaum News :

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳು ನವದೆಹಲಿ ಶ್ರೀ ಶಂಕರಗೌಡ ಪಾಟೀಲರ 63 ನೇ ಜನ್ಮದಿನವನ್ನು ಬೆಳಗಾವಿ ನಗರದಲ್ಲಿ ಸರಳವಾಗಿ ಆಚರಿಸಲಾಯಿತು.

ಬೆಳಗ್ಗೆ 9-00 ಗಂಟೆಗೆ ನಗರದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು, ನಂತರ ನಗರದ ಎಚ್ಐವಿ ಪೀಡಿತ ನಂದನ ಮಕ್ಕಳ ಧಾಮಕ್ಕೆ ಭೇಟಿ ನೀಡಿ ಹಣ್ಣು ಹಂಪಲ ವಿತರಿಸಿ ಮಕ್ಕಳಿಂದ ಕೇಕ್ ಕತ್ತರಿಸಲಾಯಿತು, ತದನಂತರ ಬೆಳಗಾವಿ ಹೊರವಲಯದಲ್ಲಿರುವ ಮಹೇಶ್ ಫೌಂಡೇಶನ್ ನಲ್ಲಿ ಎಚ್ಐವಿ ಪೀಡಿತ ಮಕ್ಕಳಿಗೆ ಹಣ್ಣು ಹಂಪಲ ವಿತರಿಸಿ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಜನ್ಮದಿನವನ್ನು ಆಚರಿಸಲಾಯಿತು.

ಕಣಬರ್ಗಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಮೂಲಕ ವನ ಮಹೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜವಳಿ ನಿಗಮದ ಉಪಾಧ್ಯಕ್ಷರಾದ ಶ್ರೀ ನೀಲಕಂಠ ಮಾಸ್ತಮರಡಿ, ಅರಣ್ಯ ಅಭಿವೃದ್ಧಿ ನಿಗಮದ ಸದಸ್ಯರು ಶ್ರೀ ಸುರೇಶ್ ದೇಸಾಯಿ, ನ್ಯಾಯವಾದಿಗಳಾದ ಎನ್.ಆರ್. ಲಾತುರ್, ಬೆಳಗಾವಿ ಹಾಲು ಒಕ್ಕೂಟ ನಿರ್ದೇಶಕರಾದ ಶ್ರೀ ಎಸ್ಎಂ ಪವಾಡೆಪ್ಪನವರ್, ಬಿಜೆಪಿ ಯುವ ಮೋರ್ಚಾ ಉತ್ತರ ಅಧ್ಯಕ್ಷರಾದ ಶ್ರೀ ಸದಾನಂದ ಗುಂಟೆಪ್ಪನವರ, ಉದ್ದಿಮೆದಾರ ಶ್ರೀ ಮಲ್ಲಿಕಾರ್ಜುನ್ ಬಹದ್ದೂರ್, ಪಾಂಡು

ದೋತ್ರೆ, ಗಜು ಮಿಸಾಳೆ, ಸಂದೀಪ್ ಕನ್ನುಕರ, ಆಪ್ತ ಸಹಾಯಕರಾದ ಶ್ರೀ ಸುನಿಲ್ ದೇಶಪಾಂಡೆ, ವೈಭವ್ ಕಾಡೆ, ಬಿಜೆಪಿ ಮಹಿಳಾ ಸದಸ್ಯರಾದ ಸ್ನೇಹ ಕೋಲೆ, ಬಿಜೆಪಿ ಮುಖಂಡರಾದ ಶಿವಾಜಿ ಸುಂಟಕರ, ಸಿದ್ದು ಉಪ್ಪಿನ ಹಾಗೂ ಬಿಜೆಪಿ ಮುಖಂಡರು ಹಾಗೂ ಶ್ರೀ ಶಂಕರಗೌಡ ಪಾಟೀಲ್ ಅವರ ಅಭಿಮಾನಿಗಳು ಹಾಜರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');