ಪುರಸಭೆ ಅಧಿಕಸರಿಗಳ ನಿರ್ಲಕ್ಷ, ಮೆಟ್ಡಿಲು, ನೀರು ವ್ಯವಸ್ಥೆ ಇಲ್ಲ,ಲಕ್ಷಾಂತರ ರೂ.ನೀರಲ್ಲಿ ಹೋಮ

0
🌐 Belgaum News :

ವರದಾನ ವಾಗ ಬೇಕಾದ ಸಾರ್ವಜನಿಕ ಸುಲಭ ಶೌಚಾಲಯ ಪುರಸಭೆಯ ಅಧಿಕಾರಿಗಳ ನಿರ್ಲಕ್ಷದಿಂದ ಮಾರಕ*

ವರದಿ ದುರ್ಗೇಶ್ ಭೋವಿ ಮಸ್ಕಿ ಗ್ರಾಮಾಂತರ.

ಮಸ್ಕಿ :- ಮಸ್ಕಿ ಪಟ್ಟಣದಲ್ಲಿ ವಾರ್ಡ್ ನಂಬರ್ 22 ರಲ್ಲಿ 2019-20 ನೇ ಸಾಲಿನ ಪುರಸಭೆ ಕಾರ್ಯಾಲಯ ದಿಂದ ಸ್ವ.ಭಾ.ವಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ವರದಾನ ಆಗಬೇಕಾದ ಸಾರ್ವಜನಿಕರ ಸುಲಭ ಶೌಚಾಲಯ ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಮಾರಕವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಸ್ಕಿ ಪಟ್ಟಣದ 22ನೇ ವಾರ್ಡಿನ ಗಾಂಧಿನಗರದ ನಾಗರಿಕರು.

ಸಾರ್ವಜನಿಕರಿಗೆ ಸೌಕರ್ಯ ಕಲ್ಪಿಸುವ ಸಲುವಾಗಿ ಲಕ್ಷಾಂತರ ರೂಪಾಯಿಗಳನ್ನು ಸರ್ಕಾರ ಅನುದಾನ ಪಡೆದು ಪುರಸಭೆಯು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಶೌಚಾಲಯವನ್ನು ಕಟ್ಟಿಸಿದ್ದಾರೆ ಆದರೆ ಶೌಚಾಲಯಕೆ ಹೋಗಬೇಕಾದರೆ ಮೆಟ್ಟಲುಗಳು ಇಲ್ಲದಂತಾಗಿದೆ.

ಕಟ್ಟಿದ ಶೌಚಾಲಯವು ಚರಂಡಿ ಹರಿಯುವಂಥ ಸ್ಥಳದಲ್ಲಿದ್ದು ಮಳೆ ಬಂದರೆ ಹಿಂದೇಟು ಹಾಕುತ್ತಿದ್ದಾರೆ ಹಾಗೂ ಸಾರ್ವಜನಿಕರು ಶೌಚಾಲಯಕ್ಕೆ ಒಳಗಡೆ ಹೋದರೆ ಬಾಗಿಲು ಮುರಿದು ಹೋಗಿದೆ ಹಾಗೂ ನೀರಿನ ಸೌಲಭ್ಯ ಕೂಡ ವ್ಯವಸ್ಥೆ ಇಲ್ಲ ಹೀಗಾದರೆ ಹೇಗೆ ಶೌಚಾಲಯಕ್ಕೆ ಹೋಗುವುದು ಎಂದು ಸ್ಥಳೀಯರ ಪ್ರಶ್ನೆಯಾಗಿದೆ.

ಮೂರು ನಾಲ್ಕು ಬಾರಿ ಅಧಿಕಾರಿಗಳಿಗೆ ಗಮನಕ್ಕೂ ತಂದರು ಅಧಿಕಾರಿಗಳ ನಿರ್ಲಕ್ಷ ಮಾಡಿದ್ದಾರೆ ಹಾಗೂ ಸರಿಯಾಗಿ ನಿರ್ವಹಣೆ ಯಾಗದೆ ಪಾಳುಬಿದ್ದು ಶೌಚಾಲಯ ಜನರಿಗೆ ಅನುಕೂಲ ಆಗಬೇಕಾದ ಸಾರ್ವಜನಿಕರಿಗೆ ಈ ಸೌಚಾಲಯ ಮಾರಕವಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿನಗರ 22ನೇ ವಾರ್ಡಿನಲ್ಲಿ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯ ಅಧಿಕಾರಿಗಳ ನಿರ್ಲಕ್ಷದಿಂದ ಸರಿಯಾದ ನಿರ್ವಹಣೆ ಆಗದೆ ಪಾಳು ಬಿದ್ದಿದೆ ಸ್ಥಳೀಯ ಅಧಿಕಾರಿಗಳು ಕೂಡಲೇ ಗಮನ ಹರಿಸಿ ನಗರದಲ್ಲಿ ಪಾಳುಬಿದ್ದ ಶೌಚಾಲಯವನ್ನು ಸಾರ್ವಜನಿಕರ ಉಪಯೋಗ ವಾಗುವಂತೆ ಮಾಡಬೇಕೆಂದು ಮಾಧ್ಯಮದ ಮೂಲಕ ಸ್ಥಳೀಯ ನಾಗರಿಕರು ಮನವಿ ಮಾಡಿದ್ದಾರೆ.

ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ???.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');