ನಂದಗಾಂವ SSLC ಪರೀಕ್ಷಾ ಕೇಂದ್ರಕ್ಕೆ ಗೋಕಾಕ ಬಿಇಒ ಭೇಟಿ

0

ಗೋಕಾಕ : ತಾಲ್ಲೂಕಿನ ನಂದಗಾಂವ ಗ್ರಾಮದ  ಜಗದ್ಗುರು ಶ್ರೀ ಶಿವಲಿಂಗೇಶ್ವರ ಪದವಿಪೂರ್ವ ಕಾಲೇಜ್ ಹಾಗೂ ಮಾಧ್ಯಮಿಕ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಗೋಕಾಕ ಬಿಇಓ ಜಿ.ಬಿ. ಬಳಿಗಾರ ಭೇಟಿ ನೀಡಿ, ಪರಿಶೀಲಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಗೋಕಾಕ ಶೈಕ್ಷಣಿಕ ವಲಯದಲ್ಲಿ ಒಟ್ಟು 29 ಪರೀಕ್ಷಾ ಕೇಂದ್ರಗಳಿದ್ದು, 4547 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೇವಲ ನಾಲ್ಕು ಮಕ್ಕಳು ಪರೀಕ್ಷೆಗೆ ಗೈರಾಗಿದ್ದಾರೆ. ಮಳೆ ಇದ್ದರು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗದೇ ಖುಷಿಯಿಂದ ಪರೀಕ್ಷೆ ಬರೆದಿದ್ದಾರೆ ಎಂದರು.

ವರ್ಷವೀಡಿ ಅಭ್ಯಾಸ ಮಾಡಿದಂತ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಇದಕ್ಕೆ ಶಿಕ್ಷಕರು ಹಾಗೂ ಪೋಷಕರ ಸಹಕಾರ ಮುಖ್ಯವಾಗಿದೆ. ಅವರ ಸಹಕಾರದಿಂದಲೇ  ಹೆಚ್ಚು ಆಸಕ್ತಿಯಿಂದ ಪರೀಕ್ಷೆಗೆಮಕ್ಕಳು ಹಾಜರಾಗಿದ್ದಾರೆ. ಮಕ್ಕಳು ಹೆಚ್ಚಿನ ಅಂಕ ಪಡೆದು ಪಾಸ್ ಆಗಲಿದ್ದಾರೆ ಎಂಬ ಭರವಸೆ ಇದೆ ಎಂಬ ವಿಶ್ವಾಸವನ್ನು ಬಿಇಒ ಬಳಿಗಾರ ವ್ಯಕ್ತ ಪಡಿಸಿದರು.

ಮಕ್ಕಳು ಯಾವುದೇ ರೀತಿ ತೊಂದರೆಯಾಗದಂತೆ ಪರೀಕ್ಷೆ ಬರೆದಿದ್ದು, ಇದಕ್ಕೆ ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಎಲ್ಲರೂ ಕೆಲಸ ಮಾಡಿರುವುದೇ ಕಾರಣ ಎಂದು ಹೇಳಿದರು. ಇದೇ ವೇಳೆ ಡಿ.ಎಸ್.ಪರವಣ್ಣಿ, ಆಡಳಿತ ಮಂಡಳಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯ, ಎಲ್ಲ ಸಿಬ್ಬಂದಿ ವರ್ಗ ಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');