ಮೋದಿ, ಅಮಿತ್ ಶಾ ರಾಜೀನಾಮೆಗೆ ಆಗ್ರಹ; ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡರಿಂದ ಪ್ರತಿಭಟನೆ

0

ಬೆಂಗಳೂರು: ‘ಪೆಗಾಸಸ್’ ಎಂಬ ತಂತ್ರಾಂಶ ಬಳಸಿ, ವಿರೋಧ ‍ಪಕ್ಷದ ನಾಯಕರ ಗೋಪ್ಯತೆ ಪತ್ತೆ ಹಚ್ಚುವ ಮೂಲಕ ವಾಕ್‌ ಸ್ವಾತಂತ್ರ್ಯದ ಹಕ್ಕನ್ನು ಕಗ್ಗೊಲೆ ಮಾಡಿರುವ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನರೇಂದ್ರ ಮೋದಿ ದುರಾಡಳಿತದಲ್ಲಿ ದೇಶ ಇಂದು ಆರ್ಥಿಕತೆಯಲ್ಲಿ ಕುಸಿಯುತ್ತಿದೆ. ಕೋವಿಡ್‌ ಅಲೆ ತಡೆಯುವಲ್ಲಿ ವಿಫಲವಾಗಿದೆ. ನಿರುದ್ಯೋಗ ಹೆಚ್ಚುತ್ತಿದೆ, ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಇವುಗಳ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ದಿಟ್ಟ ಹೋರಾಟಗಳನ್ನು ಹತ್ತಿಕ್ಕಲು ವಾಮಮಾರ್ಗದಲ್ಲಿ ‘ಪೆಗಾಸಸ್‌’ ಕುತಂತ್ರಾಂಶ ಬಳಸುತ್ತಿದೆ ಎಂದು ಸಮಿತಿಯ ಮುಖಂಡ ಎಸ್.ಮನೋಹರ್ ಖಂಡಿಸಿದರು.

ಕಾಂಗ್ರೆಸ್‌ ಮುಖಂಡ ಜಿ.ಜನಾರ್ದನ್, ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಎ.ಆನಂದ್, ಶೇಖರ್, ಜಯಸಿಂಹ, ಪ್ರಕಾಶ್, ಆದಿತ್ಯ, ಉಮೇಶ್, ಚಂದ್ರಶೇಖರ್, ಪುಟ್ಟರಾಜು ಹಾಗೂ ಇತರರು ಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');