ಕಾಂಗ್ರೆಸ್ ನಾಯಕರಿಂದ ರಾಜಭವನ ಮುತ್ತಿಗೆ : ಸಿದ್ದರಾಮಯ್ಯ, ಡಿಕೆಶಿ ಅರೆಸ್ಟ್

0

ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪೆಗಸಸ್ ಗೂಢಾಚರ್ಯೆಯಲ್ಲಿ ಕೇಂದ್ರದ ಪಾತ್ರದ ತನಿಖೆ ಮಾಡುವಂತೆ ಆಗ್ರಹಿಸಿ ಇಂದು ರಾಜಭವನಕ್ಕೆ ಕಾಂಗ್ರೆಸ್ ನಾಯಕರು ಮುತ್ತಿಗೆ ಹಾಕಿದರು.

ರಾಜಭವನ ಮುತ್ತಿಗೆ ವೇಳೆ ಎಂಎಲ್​​ಸಿ ಬಿ.ಕೆ. ಹರಿಪ್ರಸಾದ್, ಶಾಸಕಿ ಅಂಜಲಿ ನಿಂಬಾಳ್ಕರ್, ಬಸನಗೌಡ ದದ್ದಲ್, ವಿ. ಮುನಿಯಪ್ಪ, ಎಂಎಲ್​ಸಿ ನಾರಾಯಣಸ್ವಾಮಿ, ತುಕರಾಂ, ಕೆ.ಸಿ. ಕೊಂಡಯ್ಯ, ರಾಮಲಿಂಗಾರೆಡ್ಡಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಭಾಗಿಯಾಗಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್​ ನಾಯಕರು ಘೋಷಣೆ ಕೂಗಿದರು. ಪೆಗಸಸ್ ಗೂಢಾಚರ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಮುಖ ಪಾತ್ರವಿದೆ. ವಿರೋಧ ಪಕ್ಷಗಳನ್ನು ಟಾರ್ಗೆಟ್​ ಮಾಡಿ ಆದ್ಯತೆ ಮೇರೆಗೆ ಕೇಂದ್ರ ಗೂಢಚರ್ಯೆ ನಡೆಸುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರಲು ಎಲ್ಲಾ ರಾಜ್ಯಗಳಲ್ಲಿ ವಿರೋಧ ಪಕ್ಷಗಳ ಸರ್ಕಾರಗಳನ್ನು ಕೆಡವಲು ಮುಂದಾಗಿತ್ತು ಎಂದು ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಪ್ರತಿಮೆಯಿಂದ ರಾಜಭವನದತ್ತ ಮುತ್ತಿಗೆ ಹಾಕಲು ಹೊರಟ ರಾಜ್ಯ ಕಾಂಗ್ರೆಸ್ ನಾಯಕರನ್ನು ಪೊಲೀಸರು ಅರೆಸ್ಟ್​ ಮಾಡಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');