ಜಲಜೀವನ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದ ಮಹೇಶ ಕುಮಠಳ್ಳಿ

0
ಬೆಳಗಾವಿ : ಅಥಣಿ ತಾಲೂಕಿನ ಸುಟ್ಟಟ್ಟಿ,ಕೊಕಟನೂರ ಸೇರಿದಂತೆ ಹಲವೆಡೆ ಅಥಣಿ ಶಾಸಕ ಹಾಗೂ ಕೊಳಗೆರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಮಾಳಿ ತೋಟದ ವಸತಿ ಹಾಗೂ ಸುಟ್ಟಟ್ಟಿ ಫಾರ್ಮ ವಸತಿ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 1 ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿ ಜಲಜೀವನ ಮಿಷನ್ ಯೋಜನೆಯ ಕಾಮಾಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಅಥಣಿ ತಾಲೂಕಿನ ಹಲವೆಡೆ ವಿವಿಧ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಜನರ ಜೀವ ರಕ್ಷಣೆಯ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಮುಖ್ಯಮಂತ್ರಿ ಬಿ ಎಸ್ ವೈ ಅವರ ನೇತೃತ್ವದ ಕರ್ನಾಟಕ ಸರ್ಕಾರ ಮುಂದಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಎಲ್ಲ ಕ್ಷೇತ್ರಗಳಲ್ಲಿ ಶಾಸಕರು ಕರ್ತವ್ಯ ನಿರತವಾಗಿದ್ದು ಜನಪರ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.
ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರದ್ದು ಎನ್ನಲಾದ ಆಡಿಯೋ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಅದು ತಮ್ಮದಲ್ಲ ಎಂದು ಅವರು ಈಗಾಗಲೇ ಮಾಧ್ಯಮಗಳಿಗೆ ಹೇಳಿರುವದಲ್ಲದೆ ಈ ಬಗ್ಗೆ ತನಿಖೆ ಆಗಲಿ ಎಂದಿದ್ದಾರೆ.

 

ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ವಲಸೆ ಬಂದ ಶಾಸಕರು ಹದಿನೇಳು ಜನರು ಸಭೆ ನಡೆಸಿದ್ದಾರೆ ಅನ್ನುವ ಮಾತು ಸುಳ್ಳು ನಾವೆಲ್ಲರೂ ಭಾರತೀಯ ಜನತಾ ಪಾರ್ಟಿಯಲ್ಲಿ ಒಂದಾಗಿ ಇದ್ದೇವೆ.ಪಕ್ಷದ ವರಿಷ್ಠರು ಮತ್ತು ಹೈಕಮಾಂಡ್ ತೀರ್ಮಾನ ಮಹತ್ವ ಪಡೆದುಕೊಳ್ಳುತ್ತದೆ ಆದರೆ ರಾಜ್ಯದಲ್ಲಿ ಇನ್ನೂ ಎರಡೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ಇರಲಿದ್ದು ಬಿ ಎಸ್ ಯಡಿಯೂರಪ್ಪ ಅವರೇ ನಮ್ಮ ನಾಯಕರಾಗಿದ್ದು ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.ಸದ್ಯ ನಾವು ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿದ್ದೇವೆ ಎಂದರು.

 

ಈ ವೇಳೆ ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಿಬಸಪ್ಪನ್ನವರ,ಸಿದ್ದಪ್ಪಾ
 ಮುದಕ್ಕನ್ನವರ,ಮಹೇಶ ಕಾರದೇವರಮಠ,ಗುರು ಮೂರ, ಕಾರದೇವರಮಠ,ಕುಮಾರ ವಿರಗವಡರ,ಶಿವಗೌಡ ನೇಮಗೌಡರ,ಸಂಗಪ್ಪಾ ಜಗದಾಳೆ,
ರಮೇಶ ಮುದಕ್ಕನ್ನವರ,ಸದಾಶಿವ ಜಗದಾಳೆ,ಸತೀಶ ದೊಡ್ಡಮನಿ,ಪ್ರಶಾಂತ ಕಾಂಬಳೆ,ಜಮಿರ ಮುಲ್ಲಾ,ಮುತ್ತಣ ರೋಡನವರ,ಜಯಪಾಲದುರ್ಗಣ್ಣವರ, ಪಿಡಿಓ ಸಿದ್ದಪ್ಪಾ ತುಂಗಳ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');