ಅಥಣಿ ಪರೀಕ್ಷಾ ಕೇಂದ್ರಕ್ಕೆ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಭೇಟಿ ಪರಿಶೀಲನೆ

0

 

ಬೆಳಗಾವಿ : ಅಥಣಿ: ಪಟ್ಟಣದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಇವತ್ತು ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು  ಗಜಾನನ ಮನ್ನಿಕೇರಿ ಇವರು ಭೇಟಿ ನೀಡಿದರು. ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರವಾದ ಜೆ.ಎ.ಲೋಕಾಪೂರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂಂದಿಗೆ ಮಾತನಾಡಿದ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ೨೨೧ ಪರೀಕ್ಷಾ ಕೇಂದ್ರಗಳಲ್ಲಿ ಇವತ್ತು ಎರಡನೇಯ ದಿನದ ಭಾಷಾವಾರು ಪರೀಕ್ಷೆ ಅತ್ಯಂತ

ಯಶಸ್ವಿಯಾಗಿ ಮುಕ್ತಾಯವಾಗಿದೆ ಸುಮಾರು ೪೫೨೩ ಮಕ್ಕಳು ಪರೀಕ್ಷೆ ನೊಂದಾಯಿತರಾಗಿದ್ದರು ಅಥಣಿ ತಾಲೂಕಿನ ೩೫ ಪರೀಕ್ಷಾ ಕೇಂದ್ರದಲ್ಲಿ ೬೭೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

 

ಇವತ್ತು ಪ್ರಥಮ ಭಾಷೆ, ದ್ವೀತಿಯ ಭಾಷೆ,ತೃತೀಯ ಭಾಷೆ ವಿಷಯಗಳಿಗೆ ಪರೀಕ್ಷೆ ನಡೆಸಲಾಯಿತು ಇವತ್ತು ಬೆಳಗ್ಗೆಯಿಂದ ಮಳೆ ಪ್ರಾರಂಭವಾಗಿದ್ದರೂ ಯಾವುದೇ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದೆ ಸರಿಯಾದ ಸಮಯಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ ಹೊಸ ಪರೀಕ್ಷಾ ಪದ್ದತಿಗೆ ಹೊಂದಿಕೊಂಡು ಪರೀಕ್ಷೆ ಬರೆದಿದ್ದಾರೆ ಎರಡು ದಿನಗಳಲ್ಲಿ ನಡೆದ ಆರು ವಿಷಯಗಳನ್ನು ಒಳಗೊಂಡ ಈ ಪರೀಕ್ಷೆಯಲ್ಲಿ ಯಾವದೇ ವಿದ್ಯಾರ್ಥಿಗಳಿಗೆ ಕೋವಿಡ್ ಇರುವ ಬಗ್ಗೆ ವರದಿಯಾಗಿಲ್ಲ ಇನ್ನು ಈ ಪರೀಕ್ಷೆಗೆ ಕೆಲ ವಿದ್ಯಾರ್ಥಿಗಳು ಗೈರಾಗಿದ್ದಾರೆ ಆ ವಿದ್ಯಾರ್ಥಿಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಕಲೆ ಹಾಕಲಾಗುತ್ತಿದ್ದು ಒಂದು ವೇಳೆ ಆ ವಿದ್ಯಾರ್ಥಿಗಳು ಆರೋಗ್ಯ ಸರಿಯಿಲ್ಲದ ಕಾರಣ ಗೈರಾಗಿದ್ದರೆ ಅಂತಹ

ವಿದ್ಯಾರ್ಥಿಗಳನ್ನ ಮುಂದಿನ ಪರೀಕ್ಷೆಗಳಲ್ಲಿ ಪ್ರೇಶ್ ವಿದ್ಯಾರ್ಥಿಗಳನ್ನಾಗಿ ಪರಿಗಣಿಸಲಾಗುವದು ಮತ್ತು ಈ ವರ್ಷದ ಪರೀಕ್ಷೆ  ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.ಈ ಸಂದರ್ಭದಲ್ಲಿ  ಅಥಣಿ ಬಿಇಓ ಜಿ ಎಮ್ ಖೋತ,ಸ್ಕೌಟ್ಸ್ ಮಾಸ್ಟರ್ ಗೈಡ್ಸ್ ಕ್ಯಾಪ್ಟನ, ಆರೋಗ್ಯ ಸಿಬ್ಬಂದಿ ಆಶಾಕಾರ್ಯಕತರು, ಪೊಲೀಸ್ ಇಲಾಖೆ ಹಾಗೂ ಪರೀಕ್ಷೆ ನಿಯೋಜಿತ ಶಿಕ್ಷಕ ಸಿಬ್ಬಂದಿ ಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');