ಸಪ್ತಸಾಗರ ಗ್ರಾಪಂ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ 

0
🌐 Belgaum News :
ಬೆಳಗಾವಿ : ಅಥಣಿ: ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಕಸ ವಿಲೇವಾರಿ ಘಟಕಕ್ಕೆ ಚಾಲನೆ ನೀಡಲಾಯಿತು.ಸಪ್ತಸಾಗರ,ತೀರ್ಥ,ಚಿಕ್ಕೂಡ  ಗ್ರಾಮಗಳಲ್ಲಿಯ ಪ್ರತಿ ಮನೆಮನೆಯ ಕಸವನ್ನ ಗ್ರಾಪಂ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ತುಂಬಿಸಿಕೊಂಡು ಗ್ರಾಮದ ಕಸ ವಿಲೇವಾರಿ ಘಟಕಕ್ಕೆ ತರಲು ಇವತ್ತು ಪ್ರಾರಂಭಿಸಲಾಯಿತು
ಕಸ ವಿಲೇವಾರಿ ಘಟಕಕ್ಕೆ ಪ್ರಾರಂಭಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ ವಾಘಮೋರೆ ಮಾತನಾಡಿ,ಗ್ರಾಮವನ್ನು ಸ್ವಚ್ಚ ಸುಂದರ ಗ್ರಾಮವನ್ನಾಗಿ ಮಾರ್ಪಡಿಸಲು ನಮ್ಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಸಪ್ತಸಾಗರ, ತೀರ್ಥ,ಚಿಕ್ಕೂಡ ಗ್ರಾಮಗಳಲ್ಲಿಯ ಕಸವನ್ನು ತ್ಯಾಜ್ಯ ವಿಲೇವಾರಿ ವಾಹನದಲ್ಲಿ ತುಂಬಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು ಗ್ರಾಮದ ಸ್ವಚ್ಚತೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಪ್ರತಿಯೊಬ್ಬರೂ ಕಸವನ್ನು ಎಲ್ಲೆಂದರಲ್ಲಿ ಚೆಲ್ಲದೇ ತ್ಯಾಜ್ಯ ವಿಲೇವಾರಿ ವಾಹನ ತಮ್ಮ ಮನೆಮನೆಗೆ ಬರುತ್ತದೆ ಅದರಲ್ಲಿ ನಿಮ್ಮ ಮನೆಯ ಕಸ ಹಾಕಬೇಕು ಎಂದರು
ಇದಲ್ಲದೇ ಘನ ಮತ್ತು ದ್ರವ ತ್ಯಾಜ್ಯಗಳಿಗಾಗಿ ಪ್ರತಿ ಕುಟುಂಬಕ್ಕೆ ಎರಡು ಬಕೆಟ್ ಗಳನ್ನು ನೀಡಿದ್ದು ನಿಮ್ಮ ಮನೆಯ ತ್ಯಾಜ್ಯಗಳನ್ನ ಆ ಬಕೆಟನಲ್ಲಿ ಸಂಗ್ರಹಿಸಿ ಮುಂಜಾನೆ ಬರುವ ವಾಹನದಲ್ಲಿ ಹಾಕಬೇಕು ಎಂದರು
ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗು ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');