ಅಥಣಿಗೆ ಆರು ಕೋಟಿ ಅನುದಾನದ ವಿಶೇಷ ರಸ್ತೆ ಡಿಸಿಎಮ್ ಲಕ್ಷ್ಮಣ ಸವದಿ

0
🌐 Belgaum News :

ಆರು ಕೊಟಿ ರೂಪಾಯಿಗಳ ಅನುದಾನವನ್ನು ಸರಕಾರ ಬಿಡುಗಡೆ

ಅಥಣಿ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಾಯಿಮಂದಿರದ ವರೆಗೆ ಸಿಮೆಂಟ್ ರಸ್ತೆ ಒಳಗೊಂಡಂತೆ ಅಥಣಿ ತಾಲೂಕಿನ ರಾಜ್ಯ ಗಡಿಯಿಂದ ಖೀಳೆಗಾಂವ, ಅಥಣಿ, ಸತ್ತಿ, ಹಿಪ್ಪರಗಿ ಮಾರ್ಗದ ಜಿಲ್ಲಾ ಗಡಿಯವರೆಗೆ ನೂತನ ರಾಜ್ಯ ಹೆದ್ದಾರಿಯ ಈ ರಸ್ತೆಯು ಅಂಬೇಡ್ಕರ್ ವೃತ್ತದಿಂದ ಸಾಯಿ ಮಂದಿರದವರೆಗೆ ರಸ್ತೆ ಸುಧಾರಣೆಯನ್ನು ಒಳಗೊಂಡಿದ್ದು 6 ಕೋಟಿ ರೂಪಾಯಿಗಳನ್ನು ಸರಕಾರ ಬಿಡುಗಡೆ ಮಾಡಲಾಗಿದೆ.
 ಅಂಬೇಡ್ಕರ್ ವೃತ್ತದಿಂದ ಸಾಯಿ ಮಂದಿರದವರೆಗೆ ಸುಸಜ್ಜಿತ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ಅಪೆಂಡಿಕ್ಸ್ ಇ ನಲ್ಲಿ ಒಟ್ಟು ಆರು ಕೊಟಿ ರೂಪಾಯಿಗಳ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದ್ದು ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಅನುಕೂಲವಾಗುವಂತೆ ಈ ರಸ್ತೆಯನ್ನು ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯೊಳಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');