ಕಾಲುವೆಗೆ ಬಿದ್ದ ಜರ್ಸಿ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಸಲಕರಣೆಯೊಂದಿಗೆ ಮೆಲಕ್ಕೆತ್ತುತ್ತಿರುವದು.

0
🌐 Belgaum News :

ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಗ್ರಾಮದ ಬಳಿ ಆಳವಾದ ಕಾಲುವೆಗೆ ಬಿದ್ದ ಜರ್ಸಿ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಸಲಕರಣೆಯೊಂದಿಗೆ ಮೆಲಕ್ಕೆತ್ತುತ್ತಿರುವದು.
ಬೈಲಹೊಂಗಲ- ಜರ್ಸಿ ಆಕಳು ಹತ್ತು ಅಡಿ ಆಳದ ಕಾಲುವೆಯಲ್ಲಿ ಬಿದ್ದು ಮೇಲಕ್ಕೆ ಬರಲಾರದ ಪರಿತಪಿಸುತ್ತಿರುವದನ್ನು ಕಂಡು ನಾಗರಿಕರು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ದೂರವಾಣಿ ಮೂಲಕ ಕರೆ ಮಾಡಿದ ಹಿನ್ನಲೆಯಲ್ಲಿ ತಕ್ಷಣ ಅಧಿಕಾರಿ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಸುರಿಯುತ್ತಿರುವ ಮಳೆ ಮಧ್ಯ ರಕ್ಷಣಾ ಸಲಕರಣೆಗಳೊಂದಿಗೆ ಕಾರ್ಯಾಚರಣೆ ನಡೆಸಿ ಜರ್ಸಿ ಆಕಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಮಾಲಿಕ ರಾಜು ಮಲ್ಲಣ್ಣವರ ಅವರಿಗೆ ಒಪ್ಪಿಸಿದ ಘಟಣೆ ತಾಲೂಕಿನ ಜಾಲಿಕೊಪ್ಪ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.
ಈ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ, ಚನ್ನಯ್ಯ ಹಿರೇಮಠ, ಚನ್ನಬಸಯ್ಯ ಮಠದ, ರಾಹುಲ ಹೋಮಕರ, ಶಿವಪ್ಪ ಅಂಬಿಗಿ ಹಾಗೂ ಗ್ರಾಮಸ್ಥರು ಇದ್ದರು. ಅಗ್ನಿ ಶಾಮಕ ಸಿಬ್ಬಂದಿಯವರ ಸಮಯ ಪ್ರಜ್ಞೆಯಿಂದ ಆಗಮಿಸಿ ಆಕಳು ರಕ್ಷಿಸಿದ್ದಕ್ಕೆ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');