ಶಶಿಕಲಾ ಜೊಲ್ಲೆ ಕೇಡಿ,,, ಬೀಳಲಿ ಕೈಗೆ ಬೇಡಿ : ಸಚಿವೆ ಜೊಲ್ಲೆ ಮನೆ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ

0
🌐 Belgaum News :

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ  ವಿವಿಧ ಸಂಘಟನೆಗಳು ಬೆಂಗಳೂರಿನ ನಿವಾಸದ ಮೇಲೆ ಮೊಟ್ಟೆ ಎಸೆದು ಇಂದು ಬೃಹತ್ ಪ್ರತಿಭಟನೆ ನಡೆಸಿದರು.

ಗರ್ಭಿಣಿಯರು ಹಾಗೂ ಅಪೌಷ್ಠಿಕ ಮಕ್ಕಳಗೆ ಮಾತೃಪೂರ್ಣ ಯೋಜನೆಯಡಿ ನೀಡುವ ಮೊಟ್ಟೆಗಳ ಟೆಂಡರ್ ನಲ್ಲಿ ಭ್ರಷ್ಟಾಚಾರ ಮಾಡಲು ಹೊರಟ ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆ ಧರಣಿ ಕುಳಿತು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

‘ಶಶಿಕಲಾ ಜೊಲ್ಲೆ ಕೇಡಿ,,, ಬೀಳಲಿ ಕೈಗೆ ಬೇಡಿ ‘ ಎಂದು ಕಿಡಿಕಾರಿದರು. ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಕ್ಷಣ ತನಿಖೆ ಆದೇಶಿಸಬೇಕು ಒತ್ತಾಯಿಸಿ, ಮನೆ ಮುಂದೆ ಧರಣಿ ಕುಳಿತು, ಪ್ರತಿಭಟನೆ  ನಡೆಸಿದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');