ಸಚಿವೆ ಶಶಿಕಲಾ ಜೊಲ್ಲೆ ತಕ್ಷಣವೇ ರಾಜೀನಾಮೆ ನೀಡಲಿ: ಸತೀಶ ಜಾರಕಿಹೊಳಿ

0
🌐 Belgaum News :

ನಿಪ್ಪಾಣಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಸಚಿವೆ ಶಶಿಕಲಾ ಜೊಲ್ಲೆ ಮೇಲೆ ಗಂಭೀರ ಆರೋಪ ಬಂದಿದೆ. ಹೀಗಾಗಿ ಅವರು ತಕ್ಷಣವೇ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಸತೀಶ ಜಾರಕಿಹೊಳಿ ಹೇಳಿದರು.

 

ಸಂಕೇಶ್ವರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ಸರ್ಕಾರ ಕೂಡಲೇ ತನಿಖೆಗೆ ಆದೇಶಬೇಕೆಂದು ಆಗ್ರಹಿಸಿದರು.

ಜೊಲ್ಲೆ ಮೇಲೆ ಬಂದಿರುವ ಆರೋಪ  ಆಶ್ಚರ್ಯ ತಂದಿದೆ: ಶಾಸಕಿ ಲಕ್ಷ್ಮೀ

ಜೊಲ್ಲೆ ಮೇಲೆ ಬಂದಿರುವ ಆರೋಪ  ಆಶ್ಚರ್ಯ ತಂದಿದೆ.  ಅವರನ್ನು,  ನಾನು ತುಂಬಾ ಹತ್ತಿರದಿಂದ ಬಲ್ಲವಳಾಗಿದ್ದೆನೆ. ಅವರಿಗೆ,  ಇದು ಅನಿರ್ವಾಯವಾಗಿರಲಿಲ್ಲ.   ಅವರು ನಿಜವಾಗಲೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೆ ಅದು ಅಘೋರ ಅಪರಾಧವಾಗಿದೆ ಎಂದು ಹೇಳಿದರು.

ಜಬಾವ್ದಾರಿಯುತ್ತ ಸ್ಥಾನದಲ್ಲಿರುವ   ಒಬ್ಬ ಮಹಿಳಾ  ಮಂತ್ರಿಯಾಗಿ ಈ ರೀತಿ ಮಾಡಬಾರದಿತ್ತು. ಈ ರೀತಿ ಮಾಡಿದ್ದಾರೋ ಇಲ್ಲೋ ಗೊತ್ತಿಲ್ಲ.  ಈ ಬಗ್ಗೆ ತನಿಖೆಯಾಗಲಿ, ಸತ್ಯಾ ಸತ್ಯತೆ ಹೊರಬರಲಿ ಎಂದರು.

ಏನಿದು ಪ್ರಕರಣ ?

ಗರ್ಭಿಣಿಯರಿಗೆ, ಅಪೌಷ್ಠಿಕ ಮಕ್ಕಳಿಗೆ ನೀಡಲಾಗುವ ‘ಮಾತೃಪೂರ್ಣ’ ಯೋಜನೆಯಲ್ಲಿ ಮೊಟ್ಟೆ ವಿತರಿಸಲು ಟೆಂಡರ್​ ಪ್ರಕ್ರಿಯೆಗೆ ಇಲಾಖೆ ಮುಂದಾಗಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಟೆಂಡರ್​ ಕರೆಯಲು ಸರ್ಕಾರ ಮುಂದಾಗಿತ್ತು. ಆದರೆ ಈ ಟೆಂಡರ್ ಅನ್ನು ತಮಗೆ ಬೇಕಾದವರಿಗೆ ನೀಡಲು ಸಚಿವರು ಮುಂದಾಗಿದ್ದರು. ಡಿಲ್ ಸಂಭಾಷಣೆ ರಹಸ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.

 

ಯೋಜನೆಗೆ ಟೆಂಡರ್​ ಏಕೆ?

ಈ ಮೊದಲು ಅಂಗನವಾಡಿಯಿಂದಲೇ ನೇರವಾಗಿ ಮೊಟ್ಟೆ ಖರೀದಿ ಮಾಡಿ ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡಲಾಗುತ್ತಿತ್ತು. ಆದರೆ ನಿರ್ಗತಿಕರಿಗೆ ನೀಡುವ ಯೋಜನೆಯಲ್ಲಿ ಹಣ ಮಾಡುವ ದುರುದ್ದೇಶದಿಂದ ಸಚಿವೆ ಶಶಿಕಲಾ ಜೊಲ್ಲೆ ಟೆಂಡರ್​ ಮೂಲಕ ಮೊಟ್ಟೆ ಖರೀದಿ ಪ್ರಕ್ರಿಯೆಗೆ ಮುಂದಾಗಿದ್ದರು. ಆ ಮೂಲಕ ಬಡವರ, ಅಪೌಷ್ಠಿಕ ಮಕ್ಕಳ ಯೋಜನೆಯಲ್ಲಿ ಅಕ್ರಮಕ್ಕೆ ಮುಂದಾಗಿ ಕಮಿಷನ್​ ಪಡೆಯಲು ಮುಂದಾಗಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');