ಉದ್ಯಮಿಗೆ 10 ಲಕ್ಷ ಡಿಮ್ಯಾಂಡ್ : ಪಿಎಸ್ಐ, ಎಸ್ ಐ ವಿರುದ್ಧ ಕೇಸ್ ದಾಖಲು

0
🌐 Belgaum News :

ಬೆಂಗಳೂರು : ಉದ್ಯಮಿ ಗೋಪಿನಾಥ್ ಎಂಬುವರಿಂದ 5 ಲಕ್ಷ ರೂ ಡಿಮ್ಯಾಂಡ್ ಇಟ್ಟ ಆರೋಪದ ಮೇಲೆ ಇನ್ಸಪೇಕ್ಟರ್ ರೇಣುಕಾ , ಎಸ್ ಐ ಗಣೇಶ್  ಹಾಗೂ ಕಾನ್ಸ್ ಟೇಬಲ್ ಹೇಮಂತ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.

ಪ್ರಕರಣವೊಂದರಲ್ಲಿ ಬಂಧಿಸಬಾರದು ಎಂದಾದರೇ 10 ಲಕ್ಷ ಕೊಡಬೇಕು ಎಂದು ಬೇಡಿಕೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಉದ್ಯಮಿ ಗೋಪಿನಾಥ್​​ರನ್ನು ಬ್ಯಾಂಕಿಗೆ ಕರೆದೊಯ್ದು ಬಲವಂತವಾಗಿ 5 ಲಕ್ಷ ರೂಪಾಯಿಗಳನ್ನ ಡ್ರಾ ಮಾಡಿಸಿ.. ಉಳಿದ 5 ಲಕ್ಷ ರೂಪಾಯಿಗೆ ಸಮಯ ನೀಡಿ ಕಿರುಕುಳ ನೀಡುತ್ತಿದ್ದರು ಎಂದು ಗೋಪಿನಾಥ್ ದೂರು ನೀಡಿದ್ದನು.

ದೂರಿನನ್ವಯ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು. ಸದ್ಯ ರೇಣುಕಾ ಸೇರಿದಂತೆ ಪೊಲೀಸ್​​ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');