ವರುಣಾಬ್ಬರಕ್ಕೆ ಗೋಕಾಕ ಅರ್ಧನಗರ ಜಲಾವೃತ:

0
🌐 Belgaum News :

ಗೋಕಾಕ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ  ಗೋಕಾಕ  ಅರ್ಧನಗರ ಜಲಾವೃತಗೊಂಡಿದ್ದು,  ನಿರಂತರವಾಗಿ ಮಳೆಯಿಂದ ಗೋಕಾಕ ಜನತೆಯ ಜೀವನ ಅಸ್ತವ್ಯಸ್ಥವಾಗಿದೆ. ಈ ವ್ಯಾಪ್ತಿಯಲ್ಲಿ 6 ಸೇತುವೆ ಮುಳುಗಡೆಯಾದರಿಂದ  ಸಂಚಾರ ಸಂರ್ಪಕ ಕಡಿತಗೊಂಡಿದೆ.

ಮಳೆಯಿಂದ  ಗೋಕಾಕ  ತಾಲೂಕಿನ 6  ಸೇತುವೆ ಮುಳುಗಡೆಯಾಗಿದ್ದು,   ಏಳೆಂಟು ಗ್ರಾಮಗಳು  ನದಿಯಂತೆ ಆಗಿವೆ. ಅಪಾಯವನ್ನು ಲೆಕ್ಕಿಸದೇ ವಾಹನ ಸವಾರರು ಪ್ರಯಾಣ ನಡೆಸುತ್ತಿದ್ದಾರೆ. ಗೋಕಾಕನಲ್ಲಿ ಮನೆಗಳ ಬಿದ್ದು ಅವಾಂತರ ಸೃಷ್ಠಿಯಾಗಿದೆ.

ಲೋಳಸೂರ ಸೇತುವೆ ಸಂಪೂರ್ಣ ಜಲಾವೃತಗೊಂಡಿದರಿಂದ  ಗೋಕಾಕ ನಗರದ ಕುಂಬಾರಗಲ್ಲಿ, ಮುಜಾವರ ಗಲ್ಲಿ, ಬೋಜಗಾರ ಗಲ್ಲಿ, ಹಳೆ ದನದಪೇಟೆ, ಮಟನ್ ಮಾರ್ಕೆಟ್, ಮುಸ್ಲಿಂ ಘೋರಸ್ತಾನ ಸೇರಿದಂತೆ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿ ಅರ್ಧ ಗೋಕಾಕ ಪಟ್ಟಣ ಜಲಾವೃತಗೊಂಡಿದೆ.

 

ನರಗುಂದ ರಾಜ್ಯ ಹೆದ್ದಾರಿ ಜಲಾವೃತ,  ಸಂಚಾರ ಸ್ಥಗಿತ: ಘಟಪ್ರಭಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಸಂಕೇಶ್ವರ-ನರಗುಂದ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆ ಶನಿವಾರ  ಸಂರ್ಪೂಣ ಜಲಾವೃತಗೊಂಡಿದೆ.

ಹಿಡಕಲ್ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಡಲಾಗಿದ್ದರಿಂದ ಮಹಾರಾಷ್ಟ್ರ, ಬಿಜಾಪುರ, ಸೊಲ್ಲಾಪುರ್ ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾದ ಲೋಳಸೂರ ಸೇತುವೆ ಮಧ್ಯರಾತ್ರಿ ಸಂಪೂರ್ಣ ಜಲಾವೃತವಾಗಿದೆ.  ಈ ಹಿನ್ನೆಲೆಯಲ್ಲಿ ಅಂತರಾಜ್ಯ ಸಂಚಾರ ಸ್ಥಗಿತಗೊಂಡಿದೆ.

ನಗರ ಹೊರವಲಯದ ಮಾರ್ಕಡೇಂಯ ಸೇತುವೆ ಸಂರ್ಪೂಣ ಜಲಾವೃತಗೊಂಡ್ಡಿದರಿಂದ. ಗೋಕಾಕ ಪಾಲ್ಸ್, ಕೊಣ್ಣೂರ, ಸಾವಳಗಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಕಡಿತಗೊಂಡಿವೆ. ಘಟಪ್ರಭಾ ನದಿ ತೀರದ ಅಡಿಬಗಟ್ಟಿ, ಮೇಳವಂಕಿ, ಚಿಗ್ಗಡೊಳ್ಳಿ, ಡಳವೇಶ್ವರ, ಅವರಾದಿ,  ಸುಣದೋಳಿ ಸೇರಿದಂತೆ  12 ಅಧಿಕ  ಗ್ರಾಮಗಳು ಮುಳಗಡೆಯಾಗಿದೆ.

ಬೆಳಗಿನ ಜಾವದಿಂದ ವರುಣಾಬ್ಬರ ತಣ್ಣಗಾದರಿಂದ  ಜನರು ಪ್ರವಾಹ ಭೀತಿಯಿಂದ  ನಿರಾಳರಾಗಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');