ಪೆಟ್ರೋಲ್, ಡಿಸೈಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆ

0
🌐 Belgaum News :

ಬೈಲಹೊಂಗಲ- ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೈಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸೈಕಲ್ ಜಾಥಾ ನಡೆಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ನೂರಾರು ಕಾರ್ಯಕಕರ್ತರು ಜಮಾವಣೆಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಬಸವರಾಜ ಕೌಜಲಗಿ ಮಾತನಾಡಿ, ಕೇಂದ್ರ
ಹಾಗೂ ರಾಜ್ಯ ಸರ್ಕಾರಗಳ ಧೋರಣೆಯಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಕೋವಿಡ್19 ಸಂದರ್ಭದಲಿ ್ಲ ಜನರು ಸಂಕಷ್ಟದ ಜೀವನ ನಡೆಸುತ್ತಿರುವಾಗ ಈ ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಿದೆ. ಕೂಡಲೇ ಸರ್ಕಾರ ಎಚ್ಚೆತು ್ತಕೊಂಡು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಬೆಲೆ ನಿಯಂತ್ರಣ ಮಾಡದಿದ್ದರೆ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲಿ ಕಾರ್ಯದರ್ಶಿ ರಾಬರ್ಟ ದದ್ದಾಪೂರ, ಮೋಹನ ರೆಡ್ಡಿ. ಪ್ರಕಾಶ ಘಾಟಗೆ, ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಶಿವರುದ್ರಪ್ಪ ಹಟ್ಟಿಹೊಳಿ. ಮುರಗೋಡ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸ್ಥಾಯಿ ಸಮಿತಿ ಅಧ್ಯಕ್ಷ ಅರ್ಜುನ ಕಲಕುಟಕರ, ಸದಸ್ಯರಾದ ಬಸವರಾಜ ಜನ್ಮಟ್ಟಿ, ಉಳವಪ್ಪ ಬಡ್ಡಿಮನಿ, ವಿಜಯ ಬೋಳನ್ನವರ, ಕಾಂಗ್ರೇಸÀ ಮುಖಂಡ ಕಿರಣ ಸಾಧುನವರ, ಮಹಾಂತೇಶ ಮತ್ತಿಕೊಪ್ಪ, ಡಾ. ಮಹಾಂತೇಶ ಕಳ್ಳಿಬಡ್ಡಿ., ಮಹೇಶ ಬೆಲ್ಲದ, ಅನಿಲ ಮೇಕಲಮರ್ಡಿ, ಶಿವಕುಮಾರ ಹಂಪಣ್ಣವರ, ಬಸವರಾಜ ಪರೂನವರ, ಉಮೇಶ ಬೊಳೆತ್ತೀನ , ಈರಣ್ಣಾ ಸಂಪಗಾಂವ, ಮಹೇಶ ಹಿರೇಮಠ, ಶಶಿಧರ ಚಿಕ್ಕೋಡಿ, ಶ್ರೀಕಾಂತ ಸುಂಕದ, ಮಲ್ಲೇಶ ಹೊಸಮನಿ, ಶಿವಾನಂದ ಸೊಲಬನ್ನವರ ,ಮಲ್ಲಪ್ಪ ಭದ್ರಶೆಟ್ಟಿ ಸುಬಾನಿ ಬಾಗವಾನ , ಈರಣ್ಣಾ ಬೇಟಗೇರಿ, ಅಶೋಕ ವಾಲಿ, ಮಂಜು ಮಾಲಬನ್ನವರ, ಚಂದ್ರು ಹೊಸೂರು, ಶ್ರೀಶೈಲ ಅಬ್ಬಾಯಿ, ಅಶ್ವಿನಿ ಇಂಗಳಗಿ, ವಿಷ್ಣು ಕಾರಭಾರಿ, ಅರುಣ ದೇಸಾಯಿ, ಚನ್ನಪ್ಪ ಶೆಟ್ಟರ, ಈರಪ್ಪ ಅಂಗಡಿ, ರಿಯಾಜ ದೊಡವಾಡ ಸುಬಾನಿ ಅತ್ತಾರ, ಈರಣ್ಣಾ ಜವಳಿ, ಮುಂತಾದವರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');