ಅಥಣಿ ನದಿ ತೀರದ ಜನರ ಬದುಕು ಅತಂತ್ರ

0
🌐 Belgaum News :
ಅಥಣಿ: ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ಹರಿವು ಹೆಚ್ಚಿದ್ದರಿಂದ ಅಥಣಿ ತಾಲೂಕಿನಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ.ಅಥಣಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಜನರನ್ನು ಸ್ಥಳಾಂತರಿಸುವ ಕೆಲಸ ಮುಂದುವರೆದಿದ್ದು ತಾಲೂಕಿನ ಸಪ್ತಸಾಗರ,ನದಿ ಇಂಗಳಗಾಂವ, ತಿರ್ಥ, ಹುಲಗಬಾಳ, ಖವಟಕೊಪ್ಪ, ಪಿ ಕೆ ನಾಗನೂರ, ಶೇಗುಣಸಿ,ಜನವಾಡ ಸೇರಿದಂತೆ ಹಲವು ಗ್ರಾಮಗಳ ನದಿ ತೀರದ ತೋಟದ ವಸತಿಯ ಜನರನ್ನು ತಾಲೂಕು ಆಡಳಿತ ಮತ್ತು ಪಂಚಾಯತ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿ ಸ್ಥಳಿಯರ ಸಹಕಾರದೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಅನುಕೂಲ ಕಲ್ಪಿಸಿದ್ದಾರೆ.ನೆರೆ ಸಂತ್ರಸ್ತರಿಗೆ ಶಾಸ್ವತ ಪರಿಹಾರದ ಕೂಗು ದಶಕಗಳಿಂದ ಕೇಳಿ ಬರುತ್ತಿದ್ದು ಈ ಬಾರಿ ನದಿ ನೀರಿನ ಹರಿವಿನ ಪ್ರಮಾಣದಷ್ಟೇ ನೀರನ್ನು ಹಿಪ್ಪರಗಿ ಜಲಾಶಯದಿಂದ ಹೊರಗೆ ಹರಿಸುವ ಮೂಲಕ ಕೃಷ್ಣಾ ನದಿಯ ಪ್ರವಾಹದ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿದ್ದು ತೊಂದರೆಗೆ ಒಳಗಾದ ಜನರ ರಕ್ಷಣೆಗೆ ಗ್ರಾಮ ಮಟ್ಟದಲ್ಲಿ ಸ್ಥಳಿಯ ಪಂಚಾಯತ ಸಿಬ್ಬಂದಿ ನೇಮಕ ಮಾಡುವ ಮೂಲಕ ಕಣ್ಗಾವಲು ಇರಿಸಲಾಗಿದೆ.ಕೃಷ್ಣಾ ನದಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ನೀರು  ಹರಿದು ಬರುತ್ತಿರುವದರಿಂದ ಮಹಾರಾಷ್ಟ್ರದ ಕೋಯ್ನಾ ಮತ್ತು ರಾಜಾಪೂರ,ಡ್ಯಾಮ್ ಸೇರಿದಂತೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು ಮುಂಜಾಗ್ರತಾ ಕ್ರಮವಾಗಿ ಜನ ಮತ್ತು ಜಾನುವಾರುಗಳ ಸ್ಥಳಾಂತರಕ್ಕೆ ತಹಶಿಲ್ದಾರ ದುಂಡಪ್ಪ ಕೋಮಾರ ಮತ್ತು ಅಥಣಿ ಡಿವೈಎಸ್ಪಿ ಎಸ್. ವಿ ಗಿರೀಶ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಬಸಪ್ಪಗೋಳ,       ಪಿಎಸ್ಐ ಕುಮಾರ ಹಾಡಕಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಜನರ ಮನವೊಲಿಸಿ ಸ್ಥಳಾಂತರ ಮಾಡುವಲ್ಲಿ ನಿರತರಾಗಿದ್ದಾರೆ.ಇನ್ನೂ ಅಥಣಿ ತಾಲೂಕಿನ ದರೂರ ಹಲ್ಯಾಳ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತವಾಗಿದ್ದು ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಸಂಪೂರ್ಣ ಸ್ಥಬ್ದವಾಗಿದ್ದು ಕಂಡು ಬಂದಿದೆ. ಈ ವೇಳೆ  ಇನ್ನೂ ಪ್ರವಾಹ ಪರಿಸ್ಥಿತಿ ನೀರ್ವಹಣೆ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ 2005 ರಲ್ಲಿ ಎದುರಾದ ರೀತಿಯಲ್ಲಿ ಸದ್ಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು ಸರ್ಕಾರದ ಆದೇಶದಂತೆ ನದಿ ತೀರದ ಗ್ರಾಮಗಳ ಅಪಾಯಮಟ್ಟದ ಪ್ರದೇಶದಲ್ಲಿ ವಾಸಿಸುವ ಜನ ಮತ್ತು ಜಾನುವಾರುಗಳನ್ನು ಸ್ಥಳಾಂತರಿಸಿದ್ದು ತಾಲ್ಲೂಕಿನ ಹಲವೆಡೆ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದರು.
ಈ ವೇಳೆ  ನುಡಲ್ ಅಧಿಕಾರಿ ರವಿ ಬಂಗಾರಪ್ಪನ್ನವರ
ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಬಸಪ್ಪಗೊಳ, ಉಪ ತಹಶಿಲ್ದಾರ ಮಹಾದೇವ ಬಿರಾದರ,ಪಿಎಸ್ಐ ಕುಮಾರ ಹಾಡಕಾರ ಉದಯಗೌಡ ಪಾಟೀಲ, ಹಾಗೂ ಹಲ್ಯಾಳ ಪಿಡಿಓ ವೆಂಕಟೇಶ ಸಂದ್ರಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸ್ಥಳಕ್ಕೆ ಆಗಮಿಸಿದ್ದ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮಾಧ್ಯಮಗಳೊಂದಿಗೆ  ಮಾತನಾಡಿ ನದಿ ತೀರದ ಗ್ರಾಮಗಳ ಜನರು ಇಂತಹ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳ ಜೊತೆಗೆ ವಾಗ್ವಾದ ಮಾಡದೆ ಸುರಕ್ಷಿತ ಸ್ಥಳಗಳಿಗೆ ತೆರಳಿ ಸಹಕರಿಸಬೇಕು. ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುವ ವಿಶ್ವಾಸವಿದೆ ಎಂದರು.

“ಚಿದಾನಂದ ಸವದಿ”

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');