ಕಾಳಜಿ ಕೇಂದ್ರಗಳಲ್ಲಿ ಎಲ್ಲ ಸೌಲಭ್ಯ ಒದಗಿಸಲಾಗುವುದು ಅಥಣಿ ತಹಶಿಲ್ದಾರ ದುಂಡಪ್ಪ ಕೊಮಾರ

0
🌐 Belgaum News :
ಅಥಣಿ ತಾಲೂಕಿನ ಎಲ್ಲ ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪ್ರವಾಹ ಸಂತ್ರಸ್ಥರು ಯಾವುದಕ್ಕೂ ಭಯ ಪಡಬಾರದು. ಮಳೆ ಪ್ರಮಾಣ ಕಡಿಮೆಯಾಗಿದೆ, ಕೃಷ್ಣಾ ನದಿಯ ಹಿನ್ನೀರು ಹರಿದು ಬರುತ್ತಿರುವುದರಿಂದ ನೀರಿನ ಏರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಅಗತ್ಯ ಬಿದ್ದಲ್ಲಿ ಜನರನ್ನು ಕರೆ ತರಲು ಬೋಟ ವ್ಯವಸ್ಥೆ ಕೂಡಾ ಮಾಡಲಾಗುವುದು, ಅಲ್ಲದೇ ಎನ್.ಡಿ.ಅರ್.ಎಫ್ ತಂಡವನ್ನು ಕರೆತರಲಾಗುವುದು, ಸಂತ್ರಸ್ಥರಿಗೆ ಯಾವುದೇ ಸಮಸ್ಯ ಉಂಟಾದಲ್ಲಿ ನೋಡಲ್ ಅಧಿಕಾರಿಗಳನ್ನು ಸಂಪರ್ಕ ಮಾಡುವಂತೆ ಅಥಣಿ ತಹಸೀಲ್ದಾರ ದುಂಡಪ್ಪ ಕೊಮಾರ ಹೇಳಿದರು.
ಗ್ರಾಮದ ಜೋರೋ ಪಾಯಿಂಟ ಕಾಳಜಿ ಕೇಂದ್ರಕ್ಕೆ ರವಿವಾರ ಸಂಜೆ ಭೇಟಿ ನೀಡಿ ಅವರು ಮಾತನಾಡುತ್ತಾ ದನ ಕರುಗಳಿಗೂ ಮೇವಿನ ವ್ಯವಸ್ಥೆ ಮಾಡಲಾಗುವುದು. ನದಿ ದಂಡೆಯಲ್ಲಿ ವಾಸವಿರುವ ಜನ ವಸತಿ ಪ್ರದೇಶದ ಜನರು ಎತ್ತರದ ಸ್ಥಳಗಳಿಗೆ ಇಲ್ಲವೆ ಕಾಳಜಿ ಕೇಂದ್ರಗಳಿಗೆ ಬರಬೇಕು. ಕೃಷ್ಣಾ ನದಿಯು ರಬಸವಾಗಿ ಹರಿಯುತ್ತಿರುವುದರಿಂದ ನೀರಿನಲ್ಲಿ ಹಾಯ್ದು ಬರುವಾಗ ಜಾಗೃತೆ ವಹಿಸಬೇಕೆಂದು ಅವರು ಹೇಳಿದರು.
 ನಂದೇಶ್ವರ, ಸತ್ತಿ, ಜನವಾಡ, ಮಹಿಷವಾಡಗಿ, ರಡ್ಡೇರಹಟ್ಟಿ ಹಾಗೂ ಇತರ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ಅಧಿಕಾರಿ ರವಿ ಬಂಗಾರೆಪ್ಪನವರ, ತಾ.ಪಂ. ಇ.ಒ ಶೇಖರ ಕರಿಬಸಪ್ಪನವರ, ಅಧಿಕಾರಿಗಳಾದ ಪ್ರವೀಣ ಪಾಟೀಲ, ಉದಯಗೌಡ ಪಾಟೀಲ, ಗ್ರೇಡ್ ೨ ತಹಸೀಲ್ದಾರ ಮಹಾದೇವ ಬಿರಾದಾರ, ಡಾ. ಎಂ.ಎಸ್. ಹುಂಡೇಕಾರ, ಡಾ. ಬಸವರಾಜ ಬಿಸ್ವಾಗರ, ಎಸ್.ಕೆ.ಪೂಜಾರ, ಪಿ.ಡಿ.ಒ ಬಿ.ಎಸ್. ಹಿರೇಮಠ, ಸಿ.ಎಲ್. ಶಿರಗಾರ, ಎಸ್.ಎಸ್. ಪೋತದಾರ, ಸತ್ತಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹಳ್ಳೂರ, ನಂದೇಶ್ವರ ಗ್ರಾ.ಪಂ. ಅಧ್ಯಕ್ಷ ರಾಮಪ್ಪ ಪರಟಿ, ಗ್ರಾಮ ಲೆಕ್ಕಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಗ್ರಾಮ ಪಂಚಾಯತ ಸಿಬ್ಬಂದಿ  ಉಪಸ್ಥಿತರಿದ್ದರು.
ಸಂತ್ರಸ್ಥರಿಗೆ ಸಂಕಷ್ಟ ತಂದ ಕೃಷ್ಣಾ ನದಿಯ ಪ್ರವಾಹ
 ಸಮೀಪದ ಸತ್ತಿ ಗ್ರಾಮದ ಮನೋಜ ಗಂಗಪ್ಪನವರ ಅವರಿಗೆ ಸೇರಿದ ಎಮ್ಮೆಯನ್ನು ಕಾಳಜಿ ಕೇಂದ್ರಕ್ಕೆ ಕರೆತರುವಾಗ ದೊಡವಾಡ ರಸ್ತೆಯ ಮೂಲಕ ಪ್ರವಾಹ ದಾಟುವಾಗ ಎಮ್ಮೆ ಪ್ರವಾಹದಲ್ಲಿ ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಯಿತು. ತಕ್ಷಣ ಅದೇ ಗ್ರಾಮದ ಆನಂದ ಚಿನಗುಂಡಿ ಎಂಬ ಯುವಕ ತನ್ನ ಜೀವದ ಭಯಬಿಟ್ಟು ಮೂಕ ಪ್ರಾಣಿಯ ರಕ್ಷಣೆ ಮಾಡಲು ಮುಂದಾಗಿ ಪ್ರವಾದಲ್ಲಿ ಗ್ರಾಮಸ್ಥರ ಸಹಾದಿಂದ ಹಗ್ಗ ಹಿಡಿದು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾನೆ.
ಮಲ್ಲು ಲೊಕೊಂಡೆ ಅವರಿಗೆ ಸೇರಿದ ಎಮ್ಮೆ ಇದೇ ಸಂದರ್ಭದಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ ಸ್ಥಳೀಯ ಯುವಕರೆ ಶೋಧ ಕಾರ್ಯ ಮುಂದುವರೆಸಿದ್ದಾರೆ.  ಅನೇಕ ಪ್ರವಾಹ ಸಂತ್ರಸ್ಥರು ಪ್ರವಾಹ ದಾಟುವಾಗ ತಮ್ಮ ಮನೆಯ ಸಾಮಗ್ರಿ, ಮಕ್ಕಳು, ವಯೋವೃದ್ಧರನ್ನು, ದನ ಕರುಗಳನ್ನು ಕರೆತರುವಾಗ ಯಾವುದೇ ಸೌಲಭ್ಯವಿಲ್ಲದೆ ಸಂಕಷ್ಟ ಪಡುವಂತಾಯಿತು. ಅನೇಕರು ಎತ್ತಿನ ಗಾಡಿ, ಟ್ರಾö್ಯಕ್ಟರ್ ಮೂಲಕ ಸಾಮಗ್ರಿಗಳನ್ನು ಪ್ರವಾಹದಿಂದ ಹೊರ ತಂದು ನಿಟ್ಟುಸಿರು ಬಿಡುತ್ತಿರುವುದು ಸಾಮಾನ್ಯವಾಗಿತ್ತು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');