ಯಡಿಯೂರಪ್ಪ ರಾಜೀನಾಮೆ ಶಿಕಾರಿಪುರದಲ್ಲಿ ಬಿಗುವಿನ ವಾತಾವರಣ, ಅಭಿಮಾನಿಗಳು ಕೆಂಡಾಮಂಡಲ

0
🌐 Belgaum News :

                ಶಿಕಾರಿಪುರ ಸಂಪೂರ್ಣ ಸ್ತಬ್ಧ                 

ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ ಬೆನ್ನಿಗೆ ಶಿಕಾರಿಪುರದಲ್ಲಿ ಬಿಗುವಿನ ವಾತಾವರಣ ಮೂಡಿದ್ದು,  ಸಂಪೂರ್ಣ ಸ್ತಬ್ಧವಾಗಿದೆ.  ಪಟ್ಟಣದಾದ್ಯಂತ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.

ಶಿಕಾರಿಪುರ ಪಟ್ಟಣದ ಬಸ್ ನಿಲ್ದಾಣ ಸುತ್ತಮುತ್ತ, ಪೆಟ್ರೋಲ್ ಬಂಕ್ ರಸ್ತೆ, ಶಿಶುವಿಹಾರ ರಸ್ತೆ, ಎಸ್.ಹೆಚ್.ರಸ್ತೆ, ತಾಲೂಕು ಆಫೀಸ್ ರಸ್ತೆ, ಮಾಸೂರು ರಸ್ತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ.

ಅಭಿಮಾನಿಗಳು ಕೆಂಡಾಮಂಡಲ:
ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಪಟ್ಟಣದಲ್ಲಿ ವರ್ತಕರು ನಿರ್ಧಾರ ಮಾಡಿ, ಅಂಗಡಿಗಳನ್ನು ಬಂದ್ ಮಾಡಿದರು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಶಿಕಾರಿಪುರ ಪಟ್ಟಣದಲ್ಲಿ ರಸ್ತೆಗಿಳಿದು ಘೋಷಣೆ ಕೂಗಿದ್ದಾರೆ. ಯಡಿಯೂರಪ್ಪ ಪರವಾಗಿ ಘೋಷಣೆಗಳನ್ನು ಕೂಗಿ, ಜೈಕಾರ ಕೂಡಿದರು.

5 ದಶಕಗಳ ಕಾಲ ನಿರತಂರ ಹೋರಾಟ ಮಾಡಿ, ಅಧಿಕಾರಕ್ಕೇರಿದ ಧೀಮಂತ ನಾಯಕನನ್ನ  ಸ್ವಪಕ್ಷದವರೆ ಅಧಿಕಾರ ಅವಧಿಯಲ್ಲಿಯೇ ಕಸಿದುಕೊಂಡಿದ್ದಾರೆ. ಮುಖ್ಯಮಂತ್ರಿ  ಯಡಿಯೂರಪ್ಪರಿಂದಲೇ ಬಿಜೆಪಿ ಅಧಿಕಾರಲ್ಲಿದೇ ಎಂಬುದು ಮೋದಿ, ಶಾ, ನಡ್ಡಾ ಅರ್ಥಮಾಡಿಕೊಳ್ಳಬೇಕಿತ್ತು ಎಂದು ಅಭಿಮಾನಿಗಳು ಕಣ್ಣಿರಿಟ್ಟರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');