ಸಚಿವೆ ಶಶಿಕಲಾರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಕಾಂಗ್ರೆಸ್ ಆಗ್ರಹ

0
🌐 Belgaum News :

ಚಿಕ್ಕೋಡಿ: ರಾಜ್ಯದಲ್ಲಿ  ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ,ಗರ್ಭಿಣಿಯರಿಗೆ ಅಂಗನವಾಡಿಗಳ ಮೂಲಕ ನೀಡಲಾಗುವ ಮೊಟ್ಟೆಗಳ ಟೆಂಡರ್ ವಿಚಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನಲೇಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಬಸವ ಸರ್ಕಲ್‍ನಲ್ಲಿ   ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಘೊಷಣೆಗಳನ್ನು ಕೂಗಿದರು. ಒಬ್ಬ ಜವಾಬ್ದಾರಿಯುತ ಮಹಿಳಾ ಸಚಿವೆ ಇದ್ದುಕೊಂಡು ಕಡು ಬಡ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಭ್ರಷ್ಟಾಚಾರ ಮಾಡಿರುವದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆ ವಿರುದ್ದ ಕೇಳಿ ಬಂದಿರುವ ಭ್ರಷ್ಟಾಚಾರ ಕುರಿತು ತನಿಖೆ ನಡೆಸಿ ಅವರ ವಿರುದ್ದ ಕಠಿಣ ಕ್ರಮ ಜರಗಿಸುವಂತೆ ಒತ್ತಾಯಿಸಿದರು. ರಾಜ್ಯ ಸರಕಾರ ಕಡು ಬಡವರಿಗೆ ನೀಡುವ ಯೋಜನೆಗಳಲ್ಲಿ ಕಮೀಷಣ ಹಣ ಪಡೆದುಕೊಂಡು ಬಡವರ ವಿರೋಧಿ ಸರಕಾರವಾಗಿದೆ ಎಂದು ಕಿಡಿಕಾರಿದರು.

ಕಮೀಷಣ ಹಣ ಪಡೆದುಕೊಳ್ಳುವ ಮೂಲಕ ಭ್ರಷ್ಟಾಚಾರ ಮಾಡಿರುವ ಸಚಿವೆ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಈ ವೇಳೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ರಾಯಬಾಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಹಾವೀರ ಮೋಹಿತೆ,ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಯಲ್ಲಪ್ಪ ಶಿಂಗೆ, ಧೂಳಗೌಡ ಪಾಟೀಲ, ರಾಹುಲ ಮಾಚಕನೂರ, ನಾಗರಮುನ್ನೋಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಕುಡಚಿ ಬ್ಲಾಕ್ ಅಧ್ಯಕ್ಷ ರೇವಣ್ಣ ಸರವ, ಜಿಲ್ಲಾ ಯೂಥ ಉಪಾಧ್ಯಕ್ಷ ಸಿದ್ದಿಕ್ ಅಂಕಲಗಿ,ಮಹಾದೇವ ಕೊಲಾಪೂರೆ, ಧನರಾಜ ಶೆಂಡೂರೆ,ರಾಜಕುಮಾರ ಕೊಟಗಿ ಹಾಗೂ ಇತರರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');