ಸತೀಶ ಜಾರಕಿಹೊಳಿ ಸೂಚನೆ ಮೇರೆಗೆ ಕೆಲವೇ ಗಂಟೆಗಳಲ್ಲಿ ಸೇತುವೆ ದುರಸ್ತಿ ಮಾಡಿಸಿದ ಅಧಿಕಾರಿಗಳು; ಸಂಚಾರಕ್ಕೆ ಮುಕ್ತ

0
🌐 Belgaum News :

ಗೋಕಾಕ: ಮಾರ್ಕಂಡೇಯ ನದಿ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಗೋಕಾಕ- ಕೊಣ್ಣೂರ ಸೇತುವೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ದುರಸ್ತಿ ಮಾಡಲಾಗಿದ್ದು, ಸೇತುವೆ ಕೆಲವೇ ಗಂಟೆಗಳಲ್ಲಿ ಸಂಚಾರಕ್ಕೆ ಮುಕ್ತವಾಗಿದೆ.

ಗೋಕಾಕದಿಂದ ಗೋಕಾಕ್ ಫಾಲ್ಸ್, ಕೊಣ್ಣೂರ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿ, ಸಂಚಾರ ಕಡಿತಗೊಂಡಿತ್ತು. ಸ್ಥಳಕ್ಕೆ ಇಂದು ಬೆಳಿಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಕೆಲವೇ ಗಂಟೆಗಳಲ್ಲಿ ದುರಸ್ತಿ:

ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ದುರಸ್ತಿ ಕಾರ್ಯ ಕೈಗೊಂಡು, ಕೆಲವೇ ಗಂಟೆಗಳಲ್ಲಿ ಸೇತುವೆಯನ್ನು ಸಂಚಾರಕ್ಕೆ ಮುಕ್ತವನ್ನಾಗಿಸಿದ್ದಾರೆ. ನಗರಸಭೆ, ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಸೇತುವೆ ಮಾರ್ಗವಾಗಿಯೇ ಬೆಳಗಾವಿಗೆ ಬಂದ ಸತೀಶ:

ಸೇತುವೆ ದುರಸ್ತಿ ಕಾರ್ಯವನ್ನು ಖುದ್ದಾಗಿ ನಿಂತು ಪರಿಶೀಲಿಸಿದ ಸತೀಶ ಜಾರಕಿಹೊಳಿ ಅವರು, ದುರಸ್ತಿ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಅದೇ ಮಾರ್ಗವಾಗಿ ಗೋಕಾಕನಿಂದ ಬೆಳಗಾವಿಗೆ ಆಗಮಿಸಿದರು. ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತಿದ್ದಂತೆ ಅವರ ವಾಹನವೇ ಸೇತುವೆ ಮೂಲಕ ಮೊದಲು ಸಂಚರಿಸಿತು.

ಸತೀಶ ಜಾರಕಿಹೊಳಿ ಅವರು ಕೆಲವೇ ಕೆಲವು ಗಂಟೆಗಳಲ್ಲಿ ಸೇತುವೆಯ ದುರಸ್ತಿ ಕಾರ್ಯ ನಡೆಯುವಂತೆ ಮಾಡಿ, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟರು. ಒಬ್ಬ ಜನಪ್ರತಿನಿಧಿ ಮನಸ್ಸು ಮಾಡಿದರೇ ಯಾವ ಸಮಸ್ಯೆಯನ್ನು ಬೇಕಾದರು ಶೀಘ್ರ ಪರಿಹರಿಸಬಹುದು ಎಂಬುದನ್ನು ಸತೀಶ ತೋರಿಸಿಕೊಟ್ಟರು.

ಸತೀಶಗೆ ಅಭಿನಂದನೆ ಸಲ್ಲಿಸಿದ ಸಾರ್ವಜನಿಕರು:
ಕೆಲವೇ ಕೆಲವು ಗಂಟೆಗಳಲ್ಲಿ ಸೇತುವೆಯ ದುರಸ್ತಿ ಕಾರ್ಯ ನಡೆಯುವಂತೆ ಮಾಡಿ, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟ ಸತೀಶ ಜಾರಕಿಹೊಳಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');