ಮಳೆ ನಿಂತರೂ, ನದಿ ತೀರದ ಜನರಿಗೆ ತಪ್ಪದ ಪ್ರವಾಹದ ಭೀತಿ

0
🌐 Belgaum News :

ಚಿಕ್ಕೋಡಿ : ಮಳೆರಾಯನ ಅಬ್ಬರ ತಗ್ಗಿದರೂ, ಕೃಷ್ಣಾದಿಂದ  ಹರಿದು ಬರುತ್ತಿರುವ  ನೀರಿನ ಮಟ್ಟ  ಮಾತ್ರ ಯಥಾಸ್ಥಿತಿಯಲ್ಲಿದೆ.   ಇಂದು (ಸೋಮವಾರ)  ಬೆಳಗಿನ ಜಾವದಿಂದ ಸುಮಾರು ಎರಡು ಅಡಿಯಷ್ಟು  ನೀರಿನ ಪ್ರಮಾಣ ಏರಿಕೆ ಕಂಡಿದೆ.

ಮಳೆ ನಿಂತರೂ ನದಿ ತೀರದ ಜನರಿಗೆ ಪ್ರವಾಹ ಭೀತಿ ತಪ್ಪಿಲ್ಲ.  ಕೃಷ್ಣಾ ನದಿ ತೀರದ ಜಮೀನುಗಳು, ರಸ್ತೆ ಜಲಾವೃಗೊಂಡಿದ್ದು,  ಈ ವ್ಯಾಪ್ತಿಯಲ್ಲಿರುವ ಚಿಕ್ಕೋಡಿ-ಅಂಕಲಿ,ಅಂಕಲಿ-ರಾಯಬಾಗ, ಅಂಕಲಿ-ಸವದತ್ತಿ ಮತ್ತು ಮಾಂಜರಿ-ಶಿರಗುಪ್ಪಿ  ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಇಲ್ಲಿನ ಜನತೆ ಬದುಕು ನೀರಲ್ಲಿ ಕೊಚ್ಚಿ ಹೋಗಿದ್ದು, ಸರ್ಕಾರ ಬೆನ್ನಿಗೆ ನೀಲ್ಲಬೇಕೆಂದು ನಿವಾಸಿಗಳು ಬೇಡಿಕೆ ಇಟ್ಟಿದ್ದಾರೆ.

ಮತ್ತೆ ಕೃಷ್ಣಾ ನದಿಗೆ 3,92,800ಕ್ಯೂಸೆಕ್ ನೀರು ಹರಿವು:

ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ರಾಜಾಪೂರ ಬ್ಯಾರೇಜ್ ಮುಖಾಂತರ ಕೃಷ್ಣಾ ನದಿಗೆ 3,92,800ಕ್ಯೂಸೆಕ್ ನೀರು ಹರಿದು ಬರುತ್ತಿದೆ.  ಹಿಪ್ಪರಗಿ ಬ್ಯಾರೇಜ್‍ದಿಂದ 3,75 ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಗಡಿ ಭಾಗದಲ್ಲಿಯೂ ಕಳೆದ ಎರಡ್ಮೂರು ದಿನಗಳಿಂದ ಮಳೆ ಸಂಪೂರ್ಣ ಕಡಿಮೆಯಾಗಿದೆ. ಆದರೂ ಕೃಷ್ಣಾ ನದಿ ಸೇರಿದಂತೆ ಉಪ ನದಿಗಳಾದ ವೇದಗಂಗಾ, ದೂಧಗಂಗಾ, ಪಂಚಗಂಗಾ ಮತ್ತು ಚಕೋತ್ರಾ ನದಿಗಳ ನೀರಿನ ಮಟ್ಟದಲ್ಲಿ ಇನ್ನು ಏರಿಕೆಯಾಗುತ್ತಿದೆ.

ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಾ ವ್ಯಾಪ್ತಿಯ ಕೆಳ ಹಂತದ 9 ಸೇತುವೆಗಳು ಇನ್ನೂ ನೀರಿನಲ್ಲಿಯೇ ಮುಳುಗಡೆಯಾಗಿವೆ.  ಇಲ್ಲಿವರೆಗೂ  ಸಂಚಾರಕ್ಕೆ ಯಾವುದೇ ಸೇತುವೆ ಮುಕ್ತವಾಗಿಲ್ಲ.  ಆಡಳಿತ ಯಂತ್ರ ಮತ್ತು ಜನ ಪ್ರತಿನಿಧಿಗಳು ನದಿ ತೀರದಲ್ಲಿಯೇ ಇದ್ದು ಜನರಿಗೆ ತೊಂದರೆಯಾಗದಂತೆ ಜಾಗೃತಿ ವಹಿಸುತ್ತಿದ್ದಾರೆ.  ಪ್ರವಾಹದಿಂದ ತೊಂದರೆಯಾಗುವ ಜನರನ್ನು ಸರಕಾರದಿಂದ ಆರಂಭಿಸಿರುವ ಕಾಳಜಿ ಕೇಂದ್ರಗಳು ಸೇರಿದಂತೆ ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಕಾರ್ಯ ನಡೆಸುತ್ತಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');