ಕಾವಲುಗಾರನ್ನು ಥಳಿಸಿ ಬೆಳ್ಳಿ , 4.5 ಲಕ್ಷ ರೂ. ದೋಚಿ ಪರಾರಿಯಾದ ದುಷ್ಕರ್ಮಿಗಳು

0
🌐 Belgaum News :

ಕಾಸರಗೋಡು:  ಮಂಜೇಶ್ವರದ ಹೊಸಂಗಡಿಯ ಜ್ಯುವೆಲ್ಲರಿ ಮಳಿಗೆಯೊಂದರಲ್ಲಿ ಬೃಹತ್ ಪ್ರಮಾಣದ ದರೋಡೆಯಾಗಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.  ಸೆಕ್ಯುರಿಟಿ ಗಾರ್ಡ್ ನನ್ನು ಥಳಿಸಿ ಖದೀಮರು ಪರಾರಿಯಾಗಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ ದರೋಡೆಕೋರರು 15 ಕೆಜಿ ಬೆಳ್ಳಿ ಮತ್ತು 4.5 ಲಕ್ಷ ರೂ. ದೋಚಿರುವುದಾಗಿ ತಿಳಿದು ಬಂದಿದೆ.

ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿಯಲ್ಲಿ ಈ ದರೋಡೆ ಘಟನೆಯು ಸೋಮವಾರ ಮುಂಜಾನೆ ನಡೆದಿದ್ದು , ಸಂಸ್ಥೆಯ ಕಾವಲುಗಾರನನ್ನು ಕಟ್ಟಿಹಾಕಿ ತಲೆಗೆ ಹೊಡೆಯಲಾಗಿದೆ. ಬಳಿಕ ತಂಡವು ಆಭರಣ ಮಳಿಗೆ ಬೀಗ ಮುರಿದು ಒಳ ಪ್ರವೇಶಿಸಿದೆ. ಎರಡು ವಾಹನಗಳಲ್ಲಿ ಬಂದ ತಂಡವು ದರೋಡೆ ನಡೆಸಿದೆ ಎಂದು ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾವಲುಗಾರ ಹೇಳಿಕೆ ನೀಡಿದ್ದಾರೆ.

ಕಾಸರಗೋಡು ಡಿವೈಎಸ್ ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಂಡದವರು ತಲುಪಿ ಪರಿಶೀಲನೆ ನಡೆಸುತ್ತಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');