ಶಿವಮೊಗ್ಗ ಜಿಲ್ಲೆಯಿಂದ ನಾಲ್ವರು ಮುಖ್ಯಮಂತ್ರಿಗಳು; ಯಾರೊಬ್ಬರೂ ಪೂರೈಸಿಲ್ಲ ಪೂರ್ಣಾವಧಿ ಅಧಿಕಾರ

0
🌐 Belgaum News :

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿಗಳಾಗಿ ಶಿವಮೊಗ್ಗ ಜಿಲ್ಲೆಯ ನಾಲ್ವರು ಪ್ರಭಾವಿ ನಾಯಕರು ಆಯ್ಕೆಯಾದರೂ ಯಾರೊಬ್ಬರಿಗೂ ಇದುವರೆಗೂ ಪೂರ್ಣಾವಧಿ ಅಧಿಕಾರ ನಡೆಸುವ ಯೋಗ ಸಿಕ್ಕಿಲ್ಲ.

ರಾಜ್ಯಕ್ಕೆ ಅತಿ ಹೆಚ್ಚು ಸಿಎಂಗಳನ್ನು ನೀಡಿದ ಕೀರ್ತಿ ಶಿವಮೊಗ್ಗಕ್ಕೆ ಸಲ್ಲುತ್ತೆ. ಕಡಿದಾಳು ಮಂಜಪ್ಪ, ಸಾರೆಕೊಪ್ಪ ಬಂಗಾರಪ್ಪ, ಜೆ.ಎಚ್. ಪಟೇಲ್, ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೇರಿದರೂ ಪೂರ್ಣಾವಧಿ ಅಧಿಕಾರ‌ ನಡೆಸಿಲ್ಲ‌.

ಕಡಿದಾಳು ಮಂಜಪ್ಪ- 1956ರ ಆಗಸ್ಟ್ 19ರಿಂದ 1956ರ ಅಕ್ಟೋಬರ್ 31ರವರೆಗೆ ಅಂದರೆ 75 ದಿನಗಳು ಮಾತ್ರ ಸಿಎಂ ಆಗಿದ್ದರು.

ಸಾರೆಕೊಪ್ಪ ಬಂಗಾರಪ್ಪ- 1990ರ ಅಕ್ಟೋಬರ್ 17ರಿಂದ 1992ರ ನವೆಂಬರ್ 19ರವರೆಗೆ ಅಂದರೆ ಎರಡು ವರ್ಷ ಸಿಎಂ ಆಗಿದ್ದರು‌.

ಜೆ.ಎಚ್. ಪಟೇಲ್ – 1996 ಮೇ 13ರಿಂದ 1999 ಅಕ್ಟೋಬರ್ 7ರವರೆಗೆ ಅಂದರೆ ಮೂರೂವರೆ ವರ್ಷ ಸಿಎಂ ಆಗಿದ್ದರು.

ಇವರು ದಾವಣಗೆರೆ ಮೂಲದವರಾದರೂ ಶಿವಮೊಗ್ಗ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಜಿಲ್ಲೆಯ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಪಟೇಲ್​, ಬಳಿಕ ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಿಎಂ ಪಟ್ಟಕ್ಕೇರಿದ್ದರು.

ಬಿ.ಎಸ್. ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದರೂ ಒಂದು ಬಾರಿಯೂ ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ.

ಬಿಎಸ್​ವೈ ಸಿಎಂ ಗದ್ದುಗೆಗೆ ಏರಿದ್ದು ಯಾವಾಗ?
ಮೊದಲ ಅವಧಿ: 2007ರ ನವೆಂಬರ್ 7ರಿಂದ 2007ರ ನವೆಂಬರ್ 19
ಎರಡನೇ ಅವಧಿ: 2008ರ ಮೇ 30ರಿಂದ 2011ರ ಜುಲೈ 31
ಮೂರನೇ ಅವಧಿ: 2018ರ ಮೇ 17ರಿಂದ 2018ರ ಮೇ 19
ನಾಲ್ಕನೇ ಅವಧಿ: 2019ರ ಜುಲೈ 26ರಿಂದ 2012ರ ಜುಲೈ 26

ಶಿವಮೊಗ್ಗ ಜಿಲ್ಲೆಯಿಂದ ನಾಲ್ವರು ನಾಯಕರು ಕರ್ನಾಟಕದ ಸಿಎಂ ಆಗಿದ್ದಾರೆ. ಆದರೆ ಯಾರೊಬ್ಬರೂ ಒಂದಿಲ್ಲೊಂದು ಕಾರಣಕ್ಕೆ ಪೂರ್ಣಾವಧಿ ಅಧಿಕಾರ ಅನುಭವಿಸಿಲ್ಲ. ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದರೂ ಅವರ ಪರಿಸ್ಥಿತಿಯೂ ಇದೇ. ಏಕೆ ಈ ಜಿಲ್ಲೆಯವರಿಗೆ ಪೂರ್ಣಾವಧಿ ಅಧಿಕಾರ ಮಾಡುವ ಯೋಗ ಸಿಗುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');