ಮೊಟ್ಟೆ ಹಗರಣ ಖಂಡಿಸಿ, ಜೊಲ್ಲೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

0
🌐 Belgaum News :

ಹುಕ್ಕೇರಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಪರಣ್ಣ ಮುನವಳ್ಳಿ  ಮೊಟ್ಟೆ ಹಗರಣ ಖಂಡಿಸಿ,  ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಕೋರ್ಟ್ ಸರ್ಕಲ್‍ನಲ್ಲಿ ಕೆಲಹೊತ್ತು ನಿಂತು ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ಮಕ್ಕಳ ಮೊಟ್ಟೆ ಕದಿಯುವ ಕಳ್ಳ ಸಚಿವೆ ಹಾಗೂ ಶಾಸಕರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಬಡವರಿಗಾಗಿ ಮಾಡಿರುವ ಯೋಜನೆಯಲ್ಲೂ ಕಮಿಷನ್ ಬೇಡುವ ಬಿಜೆಪಿ ಲಂಚಕೋರರಿಗೆ ಸಮಾಜವೇ ಧಿಕ್ಕಾರ ಹಾಕುತ್ತದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಿಜೆಪಿ ಸರ್ಕಾರ ಮನೆಗೆ ಹೋಗಲು ಇದು ಸಕಾಲ. ಬಿಜೆಪಿ ಒಳ್ಳೆಯದನ್ನು ಮಾಡಿರುವ ಉದಾಹರಣೆಗಳಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಮಹಿಳೆಯರು ಬೀದಿಗೆ ಬಂದು ಹೋರಾಡುವಂತೆ ಮಾಡಿದ ಮಹಿಳಾ ಸಚಿವೆಗೆ ತಾಯಿಯಾಗಿ ಒಂದಿಷ್ಟು ಮಮಕಾರ ಇಲ್ಲ. ಮಕ್ಕಳ ಮೊಟ್ಟೆ ಕಳ್ಳತನ ಮಾಡಿ, ಇಡೀ ಬೆಳಗಾವಿ ಜಿಲ್ಲೆಯ ಮಾನ ಮರ್ಯಾದೆ ತೆಗೆದಿದ್ದಾರೆ.

ಮಕ್ಕಳ ಬಗ್ಗೆ ಅದರಲ್ಲೂ ಸಂಕಷ್ಟದಲ್ಲಿರುವ ಮಕ್ಕಳ ಕುರಿತು ಏನೊಂದು ಕನಿಕರ ಇಲ್ಲ. ಇದು ದಯೆವೆ ಇಲ್ಲದ, ಧರ್ಮ ಗೊತ್ತಿಲ್ಲದ ಢಾಂಬಿಕ ಸರ್ಕಾರ, ಶೋಕಿ ಪಕ್ಷ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಅಂಕಲಗಿ, ಸಂತೋಷ ಮುಡಸಿ, ಪುರಸಭೆ ಸದಸ್ಯರಾದ ಜಯಪ್ರಕಾಶ ಕರಜಗಿ, ಜೀತು ಮರಡಿ, ರೇಖಾ ಚಿಕ್ಕೋಡಿ, ಸುರೇಖಾ ಗಳತಗಿಮಠ, ಮುಖಂಡರಾದ ಕೆಂಪಣ್ಣಾ ಶಿರಹಟ್ಟಿ, ರೇಖಾ ಬಂಗಾರಿ, ಸಲೀಮ್ ಕಳಾವಂತ, ಶಾನೂರ ತಹಸೀಲದಾರ, ನಿತೀನ್ ಜಾಧವ, ಅವಿನಾಶ ನಲವಡೆ, ಇರ್ಷಾದ ಮೊಖಾಶಿ, ಸಂತೋಷ ದೇಶಪಾಂಡೆ, ಕಬೀರ ಮಲೀಕ್, ಸಾಧಿಕ ಅಂಕಲಗಿ, ಭೀಮಗೌಡ ಅಮ್ಮಣಗಿ, ದಸ್ತಗೀರ ಖಾಜಿ, ಮುರಗೇಶ ಅಥಣಿ, ಪ್ರಶಾಂತ ಅಂಕಲಗಿ ಮತ್ತಿತರರ ಉಪಸ್ಥಿತರಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');