ನಿಜವಾಯ್ತು ನಳಿನ್ ಕುಮಾರ್ ಕಟೀಲ್ ಆಡಿಯೋ ಹೇಳಿಕೆ ?

0
🌐 Belgaum News :

ಬೆಂಗಳೂರು : ಕಳೆದ ಒಂದು ವಾರದ ಹಿಂದೆ ರಾಜ್ಯ ಬಿಜೆಪಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿಕೆ ಎನ್ನಲಾಗಿದ್ದ ಆಡಿಯೋ ಮಾತುಗಳು ಇಂದು ನಿಜವಾಗಿವೆ. ಆಡಿಯೋದಲ್ಲಿರುವ ಮಾತಿನಂತೆ ಸಿಎಂ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ವಿರೋಧ ಬಣದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಆಪ್ತರೊಂದಿಗೆ ಅವರು ತುಳುವಿನಲ್ಲಿ ಮಾತನಾಡಿದ್ದಾರೆ ಎನ್ನಲಾದ ಈ ಆಡಿಯೋದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುಳಿವು ನೀಡಿದ್ದರು. ಅದೇ ರೀತಿ ರಾಜಾಹುಲಿ ಭಾವುಕವಾಗಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಯಾರೇ ಆದರೂ ನಮಗೇ ಚಾನ್ಸ್ :

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಈ ಆಡಿಯೋ ಸಂಚಲನ ಸೃಷ್ಟಿಸಿತ್ತು. ತುಳುವಿನಲ್ಲಿರುವ ಆಡಿಯೋದಲ್ಲಿ, “ ಯಾರಿಗೂ ಹೇಳ್ಬೇಡಿ, ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ತಂಡವನ್ನು ತೆಗೆದು ಹೊಸ ತಂಡ ಕಟ್ಟಲಾಗುವುದು. ಮೂರು ಹೆಸರಿದೆ, ಮೂವರಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಯಾರೇ ಆದರೂ ನಮಗೇ ಚಾನ್ಸ್, ಇಲ್ಲಿಯವರನ್ನು ಯಾರನ್ನೂ ಮಾಡಲ್ಲ ಡೆಲ್ಲಿಯಿಂದಲೇ ಎಲ್ಲಾ ಆರ್ಡರ್” ಎಂದು ಈ ಆಡಿಯೋದಲ್ಲಿ ಕೇಳಿಬಂದಿದೆ. ಆದರೆ ಆಡಿಯೋದ ಖಚಿತತೆ ಇನ್ನೂ ಸ್ಪಷ್ಟವಾಗಿಲ್ಲ.

ಹೊಸ ತಂಡ ಕಟ್ಟಲಾಗುವುದು :

ನಳಿನ್ ಕುಮಾರ್ ಕಟೀಲ್ ಎನ್ನಲಾಗದ ಆಡಿಯೋದಲ್ಲಿ ಬಿಜೆಪಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ತಂಡವನ್ನು ತೆಗೆದು ಹೊಸ ತಂಡ ಕಟ್ಟಲಾಗುವುದು ಎಂದು ಹೇಳಲಾಗಿತ್ತು. ಆಡಿಯೋದಲ್ಲಿ ಸಿಎಂ ಸುಳಿವು ನೀಡಿದ ಹಾಗೇ ಸಿಎಂ ಬದಲಾವಣೆಯಾಗಿದೆ. ಈಗ ಬಿಜೆಪಿ ಹೈಕಮಾಂಡ್  ತೂಗು ಕತ್ತಿಗೆ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಇದಾರಾ ಎಂಬ ಪ್ರಶ್ನೇ ಮೂಡಿದೆ. ಕೆಲ ದಿನಗಳ ಹಿಂದೆ ‘ ಸಚಿವ ಈಶ್ವರಪ್ಪ,  ಹೊದ್ರೆ ಬರೀ ಗೂಟ ಹೋಗುತ್ತೇ ಅಷ್ಟೇ’ ಎಂಬ ಹೇಳಿಕೆ ನೀಡಿದ್ದರು, ಈ ಹೇಳಿಕೆ ಪ್ರಸ್ತುತ ಸಂದರ್ಭಕ್ಕೆ ಪುಷ್ಟಿ ನೀಡುವಂತಿದೆ.

ಯಾರು ಆ ಮೂವರು ? : 

ನಳಿನ್ ಕುಮಾರ್ ಅವರದೆನ್ನಲಾದ ಆಡಿಯೋದಲ್ಲಿ ಹೇಳಿರುವಂತೆ ಸಿಎಂ ಹುದ್ದೆಗೆ ಮೂವರ ಹೆಸರಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರೆ, ಪಕ್ಷದ ವರಿಷ್ಠರು ಪ್ರಹ್ಲಾದ್ ಜೋಶಿ, ಲಕ್ಷ್ಮಣ ಸವದಿ ಮತ್ತು ಮುರುಗೇಶ್ ನಿರಾಣಿ ಅವರಲ್ಲಿ ಒಬ್ಬರಿಗೆ ಹುದ್ದೆ ನೀಡುವ ಬಗ್ಗೆ ಆಸಕ್ತಿ ವಹಿಸಿದ್ದಾರೆ ಎಂದು ಭಿನ್ನರ ಮೂಲಗಳು ಹೇಳಿವೆ. ಆದರೆ ವರಿಷ್ಠರು ಬಸವರಾಜ ಬೊಮ್ಮಾಯಿ ಹೆಸರು ಪ್ರಸ್ತಾವಿಸಿದ್ದಾರೆ ಎಂದು ಬಿಎಸ್‍ವೈ ಆಪ್ತ ಮೂಲಗಳು ತಿಳಿಸಿದ್ದವು.///

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');