ದ್ವೀತಿಯ ಪಿಯು ವಿದ್ಯಾರ್ಥಿಗಳ ಸನ್ಮಾನ ಸಮಾರಂಭ

0
🌐 Belgaum News :

ಬೆಳಗಾವಿ, 26: ಸಿ.ಎಮ್.ಎ ಕಲಾ ಹಾಗೂ ವಾಣಿಜ್ಯ ಪದಸಂಯೋಜಿತ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ. ಪಿಯು ದ್ವೀತಿಯ ವರ್ಷದ ಪ್ರತಿಭಾವಂತ ಹಾಗು ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್.ಆರ್ಪಿ 2ನೇ ಬಟಾಲಿಯನ್ ಕಮಾಂಡಂಟ್ ಹಮಝಾ ಹುಸೇನ್ ದಖನಿ, ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಬೆಳಗಾವಿ ಇರ್ಫಾನ ಶೇಖ್ ಆಲಿ ಆಗಮಿಸಿದ್ದರು.

ಮಹಾವಿದ್ಯಾಲಯದ ಅಧ್ಯಕ್ಷ ಖಣಜ. Sಠಿಟ. ಆಅ ಎಮ್.ಬಿ. ಬಡಬಡೆ ಅಧ್ಯಕ್ಷತೆ ಸ್ಥಾನವನ್ನು ಅಲಂಕರಿಸಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿ ಜೀವನದ ಸದುಪಯೋಗ ಯೋಗ, ಸಮಯ ನಿರ್ವಹಣೆ, ತ್ಯಾಗ, ಪರಿಶ್ರಮ ಹಾಗೂ ಉನ್ನತ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಮುಖ್ಯ ಅತಿಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.
ಪಿಯು ಪ್ರಾಚಾರ್ಯರಾದ ಶ್ರೀಮತಿ ದೀಪಾ ಅಂಟಿನರವರು ಗುರುವಿನ ಮಹತ್ವದ ಕುರಿತು ತಮ್ಮ ಸ್ವರಚಿತ ಕವಿತೆಯನ್ನು ಪ್ರಸ್ತುತ ಪಡಿಸಿದರು.

ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು.

ಆಡಳಿತಾಧಿಕಾರಿಗಳಾದ ಶ್ರೀ ಅಶೋಕ ಸಂಕನ್ನವರ, ಪದವಿ ಪ್ರಾಚಾರ್ಯರಾದ ಶ್ರೀ ಉದಯ ಸುತಾರ, ಸಂಯೋಜಕರಾದ ಕೈಸರ ನವೀದ ಖತೀಬ, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸಲೇಹಾ ಸೌಕಾರ ನಿರ್ವಹಿಸಿದರು. ಹಾಗೂ ಶ್ರೀಮತಿ ಅಸಿಯಾ ಜಾಲಿಹಾಳ ಸ್ವಾಗತಿಸಿದರು. ಶ್ರೀಮತಿ ಕಮಲಾಕ್ಷಿ ಪಾಟೀಲ ವಂದಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');