ಆರ್. ಸಿ. ಯು ದಲ್ಲಿ ಹಿಂದಿ ಪಠ್ಯಪುಸ್ತಕಗಳ ಬಿಡುಗಡೆ

0
🌐 Belgaum News :

 ಡಾ. ರಾಜೇಂದ್ರ ಪೋವಾರ ಇವರು ಸಂಪಾದಿಸಿದ ಹಿಂದಿ ವಿಷಯದ ನಾಲ್ಕು ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.                                                              

ಬೆಳಗಾವಿ, ಜು.26: ಈ ಬಾರಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷದಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಯುಜಿಸಿ ಮಾರ್ಗಸೂಚಿಯ ಪ್ರಕಾರ ಸಿಬಿಸಿಎಸ್ ಅಭ್ಯಾಸ ಕ್ರಮವನ್ನು ಅಳವಡಿಸಲಾಗಿದ್ದು, ಇದರ ಪ್ರಕಾರ ಡಾ. ರಾಜೇಂದ್ರ ಪೋವಾರ ಇವರು ಸಂಪಾದಿಸಿದ ಹಿಂದಿ ವಿಷಯದ ನಾಲ್ಕು ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.
ಅಧ್ಯಯನ ಮಂಡಳದ ಅಧ್ಯಕ್ಷರಾದ ಡಾ. ಚಂದ್ರಕಾಂತ ವಾಘಮಾರೆ, ಪಠ್ಯಪುಸ್ತಕಗಳ ಸಂಪಾದಕರು ಮತ್ತು ಆರ್‍ಪಿಡಿ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥರಾದ ಡಾ. ರಾಜೇಂದ್ರ ಪೋವಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರು ಮತ್ತು ಸಹಾಯಕ ಸಂಪಾದಕರಾದ ಪ್ರಾ. ಶಂಕರಮೂರ್ತಿ ಕೆ. ಎನ್., ಸಂಘದ ಸೆಕ್ರೆಟರಿ ಮತ್ತು ಸಹಾಯಕ ಸಂಪಾದಕರಾದ ಡಾ. ಡಿ. ಎಮ್. ಮುಲ್ಲಾ, ಡಾ. ಅಮಿತ ಚಿಂಗಳಿ ಮತ್ತು ಡಾ. ಮಹಾದೇವ ಸಂಕಪಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕೊವಿಡ್ ಮಾರ್ಗಸೂಚಿಯಂತೆ ಗುರುವಾರದಂದು ಆರ್‍ಸಿಯು ಕುಲಪತಿ ಪ್ರೊ. ಎಮ್. ರಾಮಚಂದ್ರ ಗೌಡಾ ಮತ್ತು ರಜಿಸ್ಟ್ರ್ಟಾರ್ ಪ್ರೊ‌.ಬಸವರಾಜ ಪದ್ಮಶಾಲಿ ಇವರು ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ. ಚಂದ್ರಕಾಂತ ವಾಘಮಾರೆಯವರು ಸ್ವಾಗತ ಕೋರುತ್ತ, ಹೊಸ ಹಿಂದಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ಬಗ್ಗೆ ವಿವರಿಸಿದರು. ಕುಲಪತಿ ಪ್ರೊ. ಎಮ್ ರಾಮಚಂದ್ರಗೌಡ ಮಾತನಾಡಿ, ಡಾ. ರಾಜೇಂದ್ರ ಪೋವಾರ ಹಿಂದಿ ಅಭ್ಯಾಸ ಮಂಡಳದ ಸದಸ್ಯರಾಗಿದ್ದು, ಹಿಂದಿ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಿದ್ದರೆ ಎಂದು ಹಾರೈಸಿ, ಇತರ ಪ್ರಾಧ್ಯಾಪಕರ ಸಹಾಯದಿಂದ ಪಠ್ಯಪುಸ್ತಕಗಳನ್ನು ಸಹ ಸಮಯಕ್ಕೆ ಸರಿಯಾಗಿ ಪ್ರಕಾಶನಗೊಳಿಸಿದ್ದಕ್ಕಾಗಿ ಎಲ್ಲರನ್ನು ಅವರು ಅಭಿನಂದಿಸಿದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');