ಸಚಿವೆ ಜೊಲ್ಲೆ ವಜಾಗೊಳಿಸಲು ಕಾಂಗ್ರೆಸ್ ಪ್ರತಿಭಟನೆ.

0
🌐 Belgaum News :
ಅಥಣಿ- ಜನ ಪ್ರವಾಹ ಸಂಕಷ್ಟದಲ್ಲಿ ತತ್ತರಿಸಿ ಸಾವು ನೋವಿನ ನಡುವೆ ಇದ್ದರೆ ಬಿಜೆಪಿಯವರು ಅಪೌಷ್ಟಿಕ ಮಕ್ಕಳ ಹಾಗೂ ಗರ್ಭಿಣಿ ಹೆಣ್ಣುಮಕ್ಕಳಿಗೆ ವಿತರಿಸ ಬೇಕಾದ ಆಹಾರಧಾನ್ಯ ಹಾಗೂ ಮೊಟ್ಟೆ ವಿತರಣೆಯಲ್ಲಿಯೂ ಕೂಡ ಹಣ ತಿನ್ನುತ್ತಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಗಜಾನನ ಮಂಗಸೂಳಿ ಅವರು ಹೇಳಿದರು.
ಅವರು ಸೋಮವಾರ ಬೆಳಿಗ್ಗೆ ಸ್ಥಳೀಯ ಮಿನಿ ವಿಧಾನಸೌಧ ಅಥಣಿ ಆವರಣದಲ್ಲಿ ಅಥಣಿ ಹಾಗೂ ತೆಲಸಂಗ್ ಬ್ಲಾಕ್ ಕಾಂಗ್ರೇಸ್ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡಲು ಗುತ್ತಿಗೆದಾರರಿಂದ ಪ್ರತಿ ತಿಂಗಳು ಒಂದು ಕೋಟಿ ರೂಪಾಯಿ ಕಮಿಷನ್ ಗೆ ಬೇಡಿಕೆಯಿಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆಯವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸುವಂತೆ ಒತ್ತಾಯಿಸಿ ತಹಸಿಲ್ದಾರ ಅಥಣಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ ಅವರು ಈ ಹಿಂದೆ ಪ್ರವಾಹ ಬಂದಾಗ ಮುಂಬೈಯಲ್ಲಿದ್ದ ಬಿಜೆಪಿ ಜನಪ್ರತಿನಿಧಿಗಳು. ಈಗ ಮುಖ್ಯಮಂತ್ರಿ ಬದಲಾವಣೆ ವಿಷಯ ಹಿಡಿದು ರಾಜಕಾರಣ ಮಾಡ್ತಿದ್ದಾರೆ ಹೊರತು ಪ್ರವಾಹ ಪೀಡಿತ ಜನರತ್ತ ನೋಡ್ತಿಲ್ಲ. ಸಾಮಾನ್ಯ ಜನ ಅಷ್ಟೆ ಅಲ್ಲ ಬಿಜೆಪಿಯವರೆ ಬ್ರಷ್ಟ ಪಕ್ಷ ಎಂದು ಹೇಳ್ತಿದ್ದಾರೆ, ಬಡವರ ಹೊಟ್ಟೆಗೆ ಮತ್ತು ಮಕ್ಕಳಿಗೆ ಕೊಡಬೇಕಾದ ಆಹಾರಧಾನ್ಯದಲ್ಲಿ ಕನ್ನ ಹಾಕುವುದು ನಿಮಗೆ ನಾಚುಕೆ ಯಾಗುವುದಿಲ್ಲವೆ ಎಂದು ಶಶಿಕಲಾ ಜೊಲ್ಲೆ ಅವರನ್ನು ಉದ್ದೇಶಿಸಿ ಹೇಳಿದರು ಮತ್ತು
ಅಥಣಿ ಭಾಗ ಸುಮಾರು 22 ಹಳ್ಳಿಗಳು ಪ್ರವಾಹದಿಂದ ಬಾಧಿತವಾಗಿವೆ ಇದನ್ನು ಕೇಳದ ಸರಕಾರ ತಮ್ಮ ಹಗರಣದಲ್ಲಿ ತೊಡಗಿವೆ ಎಂದು ಹೇಳಿದರು.
ನಂತರ ಮಾತನಾಡಿದ ತೆಲಸಂಗ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ ಅವರು ಮಾತನಾಡುತ್ತಾ ಇಡೀ ದೇಶದಲ್ಲಿ ಅತೀ ಬ್ರಷ್ಟ ಸರಕಾರ ಎಂದರೆ ಅದು ಬಿಜೆಪಿ ಪಕ್ಷ, ಅಪೌಷ್ಠಿಕ ಮಕ್ಕಳು ತಿನ್ನುವಂತಹ ಆಹಾರ ಧಾನದ್ಯಗಳಲ್ಲಿಯೂ ಬ್ರಷ್ಟಾಚಾರ ಮಾಡಿ ಮೊಟ್ಟೆ ಕಮೀಷನ್ ಪಡೆಯುತ್ತಿರುವುದು ತೀರಾ ನಾಚಿಗೇಡಿತನ ಇಂತಹ ಸಚಿವರನ್ನೂ ಯಡಿಯೂರಪ್ಪನವರು ಕೂಡಲೇ ವಜಾ ಗೊಳಿಸಿಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕೈಯಲ್ಲಿ ಮೊಟ್ಟೆ ಹಿಡಿದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಚೀವೆ ಜೊಲ್ಲೆ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಅಥಣಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ವೇಳೆ ಎಸ್ ಕೆ ಬುಟಾಳಿ, ಬಸವರಾಜ ಬುಟಾಳಿ, ರಾವಸಾಬ ಐಹೊಳೆ, ಅನೀಲ ಸುಣಧೋಳಿ, ಸುನೀಲ ಸಂಕ,  ಶಿವಾನಂದ ಸಂಕ, ಅಸ್ಲಮ ನಾಲಬಂದ, ಬಸವರಾಜ ಠಕ್ಕಣ್ಣವರ, ರಾಜು ಜಮಖಂಡಿಕರ, ಗೌತಮ‌ ಪರಾಂಜಪೆ, ತೌಸಿಫ್ ಸಾಂಗಲೀಕರ್, ಪ್ರಕಾಶ ಕೋಳಿ, ಸುರೇಶ ಕೊಳಂಬಿ, ಚಿದಾನಂದ ಮುಕಣಿ, ಆಕಾಶ ಬುಟಾಳಿ, ಬಸವರಾಜ ಹಳ್ಳದಮಳ, ರವಿ ಬಕಾರಿ, ಸಿದ್ದು ಕೋಕಟನೂರ, ಸಚಿನ ಬುಟಾಳಿ, ರವಿ ಬಡಕಂಬಿ, ಸಚಿನ ಬಡಕಂಬಿ, ಸಲಾಂ ಕಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');