ಸಾಂಬ್ರಾದಿಂದ ದೆಹಲಿಗೆ ನೇರ ವಿಮಾನ ಹಾರಾಟ: ಅಧಿಕಾರಗಳ ಮಹತ್ವದ ಚರ್ಚೆ

0
🌐 Belgaum News :

ಬೆಳಗಾವಿ: ಬೆಳಗಾವಿ ಜನತೆಯ ಬಹು ದಿನಗಳ ಕನಸು ಈಡೇರುವ ಸಾಧ್ಯತೆ ಇದೆ. ಬೆಳಗಾವಿ – ದೆಹಲಿವರೆಗೆ  ನೇರವಾಗಿ ವಿಮಾನ ಹಾರಾಟ ಆರಂಭಿಸುವ ಕುರಿತು  ಅಧಿಕಾರಗಳು  ಇಂದು ಮಹತ್ವದ ಚರ್ಚೆಯನ್ನು ನಡೆಸಿದ್ದಾರೆ.

ಬೆಂಗಳೂರು  ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಿಗೆ ಬೆಳಗಾವಿಯಿಂದ ಅತೀ ಹೆಚ್ಚು ಜನರು  ಪ್ರಯಾಣ ಬೆಳೆಸುತ್ತಾರೆ. ಲಾಕ್ಡೌನ್ ಸಂದರ್ಭದಲ್ಲಿ ಬೆಳಗಾವಿ ಸಾಂಬ್ರಾದಿಂದ ಸಾವಿರಾರು ಜನರು  ಪ್ರಯಾಣ ಬೆಳೆಸಿದ್ದಾರೆ. ಆದರೆ,  ದೆಹಲಿಗೆ ನೇರವಾಗಿ ತೆರಳು ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು. ಬೆಳಗಾಯಿಂದ- ಪುಣೆ ಹೊರತು ಪಡಿಸಿ, ಮುಂಬೈ ಹಾಗೂ ಹೈದ್ರಾಬಾದ್ ಮೂಲಕ ತೆರಳುವ ಅಗತ್ಯ ಇತ್ತು.

ಇಲ್ಲಿಂದ ವಿಮಾನಯಾನಿಗಳ ಹೆಚ್ಚಳ ಬಳಿಕ ಅಧಿಕಾರಿಗಳು ಮಹತ್ವದ ನಿರ್ಧಾರಕ್ಕೆ ಕೈಹಾಕಿದ್ದಾರೆ. 149 ಸೀಟರ್ ಸ್ಫೈಸ್ ಜೆಟ್ ವಿಮಾನ ಆಗಸ್ಟ್ 13ರಿಂದ ಬೆಳಗಾವಿ – ದೆಹಲಿ – ಲೇಹ್ ಮಧ್ಯೆ ಸಂಚರಿಸಲಿದೆ. ಆರಂಭದಲ್ಲಿ ವಾರದಲ್ಲಿ 2 ದಿನ ಅಂದರೆ, ಸೋಮವಾರ ಮತ್ತು ಶುಕ್ರವಾರ ವಿಮಾನ ಸಂಚರಿಸಲಿದೆ. ಸಂಜೆ 4.35ಕ್ಕೆ ಬೆಳಗಾವಿಗೆ ಆಗಮಿಸಲಿರುವ ವಿಮಾನ 5.05ಕ್ಕೆ ಇಲ್ಲಿಂದ ದೆಹಲಿಗೆ ಹೊರಡಲಿದೆ.

ಈಚೆಗಷ್ಟೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ಈ ಬಗ್ಗೆ ವಿಶೇಷ ಪ್ರಯತ್ನ ಮಾಡಿದ್ದರು. ಮುಖ್ಯಮಂತ್ರಿಗಳ ಮೂಲಕ ಪತ್ರವ್ಯವಹಾರವನ್ನೂ ನಡೆಸಿದ್ದಲ್ಲದೆ, 2 -3 ಮೀಟಿಂಗ್ ನಡೆಸಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');