ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕರು: ಸಹೋದರನ ಎದುರೇ ನಡೆಯಿತು ದುರಂತ

0
🌐 Belgaum News :

ಉತ್ತರ ಪ್ರದೇಶದ: ಮನೆಯಲ್ಲಿ ತಂದೆ-ತಾಯಿ ಇಲ್ಲದಾಗ  ಸಹೋದರನ ಎದುರೇ  ಅಪ್ರಾಪ್ತ ಬಾಲಕಿ ಮೇಲೆ  ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯದ ವಿಡಿಯೋವನ್ನು ಸಹ ಚಿತ್ರೀಕರಿಸಿರುವ ಹೃದಯ ವಿದ್ರಾವಕ ಘಟನೆ   ಮುಜಾಫರ್​​ನಗರದಲ್ಲಿ  ಮಂಗಳವಾರ ನಡೆದಿದೆ.

ಬಾಲಕಿ ಪೋಷಕರು ಕಾರ್ಯಕ್ರಮ ನಿಮಿತ್ತ ಬೇರೆ ಹಳ್ಳಿಗೆ ಹೊರಟಿದ್ದಾಗ, ಪಕ್ಕದ ಮನೆಯವರು ತಮ್ಮ ಮನೆಗೆ ಪ್ರವೇಶಿಸಿ ಮಕ್ಕಳು ಮಲಗಿದ್ದನ್ನು ನೋಡಿದ್ದಾರೆ. ನಾವು ಊರಿಗೆ ತರಳಿದ ಬಳಿಕ ಕಾಮುಕರು ಈ ಕೃತ್ಯ ಎಸಗಿದ್ದಾರೆ ಎಂದು ಬಾಲಕಿಯ ತಂದೆ ನೀಡಿದ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸ್ ರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ವಿವರ:-

ಆರೋಪಿ ಬಾಲಕಿಗೆ ಗನ್ ತೋರಿಸಿ ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಒಳಗೆ ನುಗ್ಗಿದ್ದಾನೆ. ನಂತರ ಆರೋಪಿಗಳು ಬಾಲಕಿಯ 12 ವರ್ಷದ ಸಹೋದರನ ಎದುರೇ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಕೃತ್ಯದ ವಿಡಿಯೋವನ್ನು ಸಹ ಚಿತ್ರೀಕರಿಸಿದ್ದು, ಪೊಲೀಸರಿಗೆ ದೂರು ನೀಡಿದರೆ ಅದನ್ನು ವೈರಲ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ.

ಬಾಲಕಿಯ ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');