ರಾಜಧಾನಿಯಲ್ಲಿ ರಾರಾಜಿಸುತ್ತಿರುವ ಅಬ್ದುಲ್‌ ಕಲಾಂ ಪ್ರತಿಮೆ

0
🌐 Belgaum News :

ಬೆಂಗಳೂರು:   ಭಾರತ ಕಂಡ ಶ್ರೇಷ್ಠ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಪುಣ್ಯದಿನ. ಅವರ ನೆನಪನ್ನು ಚಿರಸ್ಥಾಯಿಯಾಗಿರೋ ಸಲುವಾಗಿ ಸಿಲಿಕಾನ್‌ ಸಿಟಿಯಲ್ಲಿ ವಿಶಿಷ್ಟ ಪ್ರಯತ್ನವೊಂದನ್ನು ಮಾಡಲಾಗಿದೆ. ಕಚ್ಚಾವಸ್ತುಗಳಿಂದ ನಿರ್ಮಿಸಿರುವ ಅಬ್ದುಲ್‌ ಕಲಾಂ ಅವರ ಮೂರ್ತಿ ಇದೀಗ ಸಿಲಿಕಾನ್‌ ಸಿಟಿಯ ಜನರನ್ನು ಆಕರ್ಷಿಸುತ್ತಿದೆ.

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಬಳಿಯಲ್ಲಿ ಈ ಪ್ರತಿಮೆ ನಿರ್ಮಾಣಗೊಂಡಿದ್ದು, ರೈಲ್ವೆ ನಿಲ್ದಾಣದಿಂದ ತುಮಕೂರು ಕಡೆಗೆ ಪ್ರಯಾಣ ಬೆಳೆಸುವವರಿಗೆ ಕಾಣ ಸಿಗುತ್ತಿದೆ. ಸುಮಾರು 800 ಕಿಲೋಗ್ರಾಂ ತೂಕವಿರುವ ಅಬ್ದುಲ್‌ ಕಲಾಂ ಅವರ ಪ್ರತಿಮೆ ಸುಮಾರು 7.8 ಅಡಿಯಷ್ಟು ಎತ್ತರವಿದೆ. ಸಂಪೂರ್ಣ ಮೂರ್ತಿಯನ್ನು ನೆಟ್‌ ಬೋಲ್ಟ್‌, ತಂತಿಯ ಎಳೆ, ಮೆಟಾಲಿಕ್‌ ರೋಪ್‌ ಹಾಗೂ ಡ್ತಾಂಪರ್‌ ಸೇರಿದಂತೆ ಎಲ್ಲಾ ಕಚ್ಚಾ ವಸ್ತುಗಳನ್ನು ಬಳಸಿ ಈ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ.

ಅಷ್ಟಕ್ಕೂ ಈ ಮೂರ್ತಿ ನಿರ್ಮಾಣಕ್ಕೆ ವೆಚ್ಚವಾಗಿದ್ದು ಕೇವಲ ಮೂರು ಸಾವಿರ ರೂಪಾಯಿಗಳು ಮಾತ್ರ. ಇಂಜಿನಿಯರ್‌ಗಳಾದ ಸಿ.ಪಿ.ಶ್ರೀಧರ್‌ ಹಾಗೂ ಶ್ರೀನಿವಾಸ ರಾಜು ಅವರ ನೇತೃತ್ವದಲ್ಲಿ ಅಬ್ದುಲ್‌ ಕಲಾಂ ಅವರ ಮೂರ್ತಿಯನ್ನು ನಿರ್ಮಿಸಲಾಗಿದೆ. ಇದೀಗ ಕಲಾಂ ಅವರ ಮೂರ್ತಿಯನ್ನು ಕಂಡ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');