ಸುಪ್ರೀಂಕೋರ್ಟ್ ಮಹತ್ವದ ತೀರ್ಪು: ಮೈಸೂರು ಅರಸರ ಪಾಲಾದ 1561.31 ಎಕರೆ ಜಮೀನು

0
🌐 Belgaum News :

ಮೈಸೂರ:  ಏಳು  ದಶಗಳಿಂದ ಸುಪ್ರೀಂಕೋರ್ಟ್ ಮೇಟ್ಟಿಲೇರಿದ ಮೈಸೂರು ಅರಸರ ಜಮೀನಿನ ವಾದ-ವಿವಾದ ಪೂರ್ಣಗೊಂಡಿದ್ದು,  ಕುರುಬರಹಳ್ಳಿಯಲ್ಲಿರುವ 1561.31 ಎಕರೆ ಜಮೀನು ಮೈಸೂರು ಅರಸರಿಗೇ ಸೇರಿದ್ದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಮಂಗಳವಾರ ನೀಡಿದೆ.

ಈ ಭೂಮಿಯನ್ನು ವಶಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಕೈ ಬೀಡಬೇಕೆಂದು ಹೇಳಿದೆ.  ಈ ಜಮೀನು ಮೂಲವಾಗಿ ಮೈಸೂರು ಅರಸರಿಗೇ ಸೇರಿದ್ದಾಗಿದೆ ಎಂದು ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಉದಯ್ ಲಲಿತ್ ಮತ್ತು ನ್ಯಾ. ಅಜಯ್ ರಸ್ತೋಗಿ ನೇತೃತ್ವದ ದ್ವಿಸದಸ್ಯ ಪೀಠ, ಈ ಭೂಮಿಯನ್ನು ಮೈಸೂರು ರಾಜಮನೆತನದವರಿಂದ ವಿವಿಧ ವ್ಯಕ್ತಿಗಳು ಖರೀದಿಸಿದ ಎಷ್ಟೋ ದಶಕಗಳ ಬಳಿಕ ಸರ್ಕಾರ ನಿದ್ರಾಸ್ಥಿತಿಯಿಂದ ಎದ್ದು ಕುಳಿತರೆ ಏನೂ ಮಾಡಲಾಗುವುದಿಲ್ಲ. ಹೀಗಾಗಿ, ಈ ಭೂಮಿ ಖರೀದಿದಾರರಿಗೆ ಸೇರಬೇಕು ಎಂಬ ವಾದವನ್ನು ಎತ್ತಿಹಿಡಿದಿದೆ.

ಖರೀದಿದಾರರ ಪರವಾಗಿ ಸುಪ್ರೀಂಕೋರ್ಟ್ ವಕೀಲ ನಿಶಾಂತ್ ಪಾಟಿಲ್ ವಾದಿಸಿದ್ದರು.

ಕುರುಬರಹಳ್ಳಿಯಲ್ಲಿರುವ ಈ ಭೂಮಿಯನ್ನು ಖರಾಬ್ ಜಮೀನು ಎಂದು 2015ರಲ್ಲಿ ಆದೇಶಿಸಿದ್ದ ಜಿಲ್ಲಾಧಿಕಾರಿ ಕ್ರಮವನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿ, ಇದು ಖರೀದಿದಾರರಿಗೆ ಸೇರಬೇಕು ಎಂದು ತಿಳಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸರ್ಕಾರ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಕಾನೂನು ಹೋರಾಟಕ್ಕೆ ಮುಂದಾಗಿತ್ತು. ಆದರೆ, ಸುಪ್ರೀಂಕೋರ್ಟ್ ನಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿರುವುದರಿಂದ ಒಂದೂವರೆ ಸಾವಿರ ಎಕರೆ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಂತಾಗಿದೆ.

ಭೂಮಿಯಲ್ಲೀಗ ಏನಿವೆ?
: ಈ ಜಮೀನಿನ ವ್ಯಾಪ್ತಿಯಲ್ಲಿ ಕೆರೆಗಳು, ಅರಣ್ಯ ಪ್ರದೇಶ, ಲಲಿತಮಹಲ್ ಅರಮನೆ, ಹೆಲಿಪ್ಯಾಡ್, ರಸ್ತೆಗಳು, ಉದ್ಯಾನವನಗಳು, ಮೃಗಾಲಯ, ರೇಸ್ ಕೋರ್ಸ್, ರಾಜ್ಯ ಆಡಳಿತ ತರಬೇತಿ ಸಂಸ್ಥೆ, ಸರ್ಕಾರಿ ಶಾಲೆಗಳು, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಮುಂತಾದವುಗಳಿವೆ. ಆದರೆ, ಇವೆಲ್ಲವನ್ನೂ ಸರ್ಕಾರ ಖರಾಬ್ ಬಿ ಭೂಮಿ ಎಂದು ವರ್ಗೀಕರಿಸಿತ್ತು. ಈ ವರ್ಗೀಕರಣವನ್ನು ಖರೀದಿದಾರರು ಒಪ್ಪಿಕೊಳ್ಳಲಿಲ್ಲ ಮತ್ತು ಸುಪ್ರೀಂಕೋರ್ಟ್ ಕೂಡ ಸರ್ಕಾರದ ಕ್ರಮ ತಳ್ಳಿಹಾಕಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');