ಸ್ವಾತಂತ್ರ್ಯ ದಿನಾಚರಣೆ: ಜು.30ರಂದು ಪೂರ್ವಭಾವಿ ಸಭೆ

0
🌐 Belgaum News :

ಬೆಳಗಾವಿ, ಜು.27: 2021 ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಕುರಿತು ಕಾರ್ಯಕ್ರಮ ಸೂಚಿಯನ್ನು ತಯಾರಿಸಲು ಹಾಗೂ ಪೂರ್ವಭಾವಿ ಸಿದ್ದತೆ ಮಾಡಲು ಅಧಿಕಾರಿಗಳ ಹಾಗೂ ಅಧಿಕಾರೇತರ ಗಣ್ಯರ ಸಭೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜುಲೈ 30ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ 2 ನೇ ಮಹಡಿಯ ಸಭಾಂಗಣದಲ್ಲಿ ನಡೆಯಲಿದೆ.
ಅಧಿಕಾರೇತರ ಗಣ್ಯರು ಸದರಿ ಸಭೆಗೆ ಹಾಜರಾಗುವ ಮೂಲಕ ಸಲಹೆಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ. ಜಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬುಡಾ ಆಯುಕ್ತರಾಗಿ ಜಿ.ಟಿ.ದಿನೇಶಕುಮಾರ್ ಅಧಿಕಾರ ಸ್ವೀಕಾರ
ಬೆಳಗಾವಿ, ಜು.27 (ಕರ್ನಾಟಕ ವಾರ್ತೆ): ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಜಿ.ಟಿ ದಿನೇಶಕುಮಾರ್ ಅವರು ಸೋಮವಾರ(ಜು.26) ಅಧಿಕಾರ ಸ್ವೀಕರಿಸಿದ್ದಾರೆ.
2010 ನೆಯ ಬ್ಯಾಚ್ ನ ಕೆ.ಎ.ಎಸ್. ಹಿರಿಯ ಶ್ರೇಣಿಯ ಅಧಿಕಾರಿಯಾಗಿರುವ ಇವರು ವಿಶೇಷ ಜಿಲ್ಲಾಧಿಕಾರಿ ಭೂಸ್ವಾಧೀನ, ಬೆಳಗಾವಿ ಅಪರ ಜಿಲ್ಲಾಧಿಕಾರಿಯಾಗಿ (ಪುನರ್ವಸತಿ) ಸೇವೆ ಸಲ್ಲಿಸಿರುವ ಅವರು ಪ್ರವಾಹ ಸಂದರ್ಭದಲ್ಲಿ ಜನಮೆಚ್ಚುಗೆ ಕಾರ್ಯ ಮಾಡಿ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೂಡ ಸ್ವೀಕರಿಸಿದ್ದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');