ಸಂತ್ರಸ್ತರ ಸಹಾಯಕ್ಕೆ ಸರ್ಕಾರವಿದೆ ಭಯಬೇಡ: ಮಹೇಶ ಕುಮಠಳ್ಳಿ

0
🌐 Belgaum News :
ಅಥಣಿ:ಪ್ರಕೃತಿ ವಿಕೋಪಗಳು ಸಹಜವಾಗಿ ಸಂಭವಿಸುತ್ತವೆ. ಪ್ರವಾಹ ಸಂತ್ರಸ್ಥರು ದೃತಿಗೇಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ. ಅಧಿಕಾರಿಗಳು ಹಗಲಿರುಳು ನಿಮ್ಮ ಸೇವೆಗೆ ಸಿದ್ಧರಿದ್ದಾರೆ. ಕಾಳಜಿ  ಕೇಂದ್ರಗಳಲ್ಲಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ. ಯಾರು ಕೂಡಾ ಧೈರ್ಯ ಕಳೆದುಕೊಳ್ಳಬೇಡಿ, ಬೇಗ ಪ್ರವಾಹ ಕಡಿಮೆಯಾಗಲೆಂದು ನಾವೇಲ್ಲೂರು ಕೃಷ್ಣಾ ನದಿಗೆ ಹಾಗೂ ದೇವರಿಗೆ ಪ್ರಾರ್ಥಿಸೋಣವೆಂದು ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.
ಗ್ರಾಮದ ಝೀರೋ ಪಾಯಿಂಟ ಕಾಳಜಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡುತ್ತಾ ಒಬ್ಬರಿಗೊಬ್ಬರು ಸಹಕಾರ ನೀಡೋಣ ಈ ಪ್ರವಾಹ ಶಾಶ್ವತ ಇರುವಂತಹದಲ್ಲಿ ಬೇಗನೆ ಇಳಿಮುಖವಾಗುತ್ತದೆ. ಕಾಳಜಿ ಕೇಂದ್ರಗಳಲ್ಲಿ ವಾಸವಿರುವ ಮಕ್ಕಳ, ವಯೋವೃದ್ಧರ ಹಾಗೂ ಮಹಿಳೆಯರು ಆರೋಗ್ಯದ ಕಾಳಜಿ ವಹಿಸಬೇಕು. ಯಾವುದೇ ಅಗತ್ಯ ಸೌಲಭ್ಯಗಳು ಬೇಕಾದಲ್ಲಿ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿರಿ ಎಂದು ಹೇಳಿದ ಅವರು ಎಲ್ಲರೂ ಒಂದೇ ಕುಟುಂಬದ ತರಹ ವಾಸವಾಗಿರಿ ನಿಮಗೆ ಶ್ವಾಶ್ವತ ಪರಿಹಾರ ಕಲ್ಪಿಸುವ ಯೋಜನೆಗೆ ನಿರಂತರ ಪ್ರಯತ್ನ ಮಾಡುತ್ತೇವೆಂದು ಹೇಳಿದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ ಕೃಷ್ಣಾ ನದಿಯ ಪ್ರವಾಹ ಎಲ್ಲರಿಗೂ ಸಂಕಷ್ಟ ತಂದಿದೆ. ಸಮಸ್ಯೆಗಳಿಗೆ ಹೆದರದೇ ಧೈರ್ಯವಾಗಿರಿ. ಇಂತಹ ಸಂದರ್ಭದಲ್ಲಿ ಒಬ್ಬರಿಗೊಬ್ಬರೂ ಸಹಕಾರ, ಸಹಬಾಳ್ವೆಯಿಂದ ಬದುಕ ಬೇಕು. ಕಷ್ಟಗಳು ನಿರಂತವಾಗಿ ಬರುವುದಿಲ್ಲ, ಬೆಳಕು ಕತ್ತಲು ಇದ್ದಾಹಾಗೆ. ಈ ಸಮಸ್ಯಗೆ ಶಾಶ್ವತ ಪರಿಹಾರ ಒದಗಿಸುವ ಕಾಲ ಬಂದೇ ಬರುತ್ತದೆ ಎಲ್ಲರೂ ತಾಳ್ಮೆಯಿಂದಿರಿ. ಸಮಯಕ್ಕೆ ಸರಿಯಾಗಿ ಊಟ ಮಾಡಿರಿ, ನಿಯಮಿತವಾಗಿ ವೈದ್ಯೋಪಚಾರ ಪಡೆಯಿರಿ ಎಂದು ಹೇಳೀದರು.
ಈ ಸಂದರ್ಭದಲ್ಲಿ ಮುಖಂಡ   ತಹಸೀಲ್ದಾರ ದುಂಡಪ್ಪ ಕೊಮಾರ, ತಾ.ಪಂ.ಇ.ಒ ಶೇಖರ ಕರಿಬಸಪ್ಪಗೊಳ, ಲೋಕೊಪಯೋಗಿ ಇಲಾಖೆಯ ಅಭಿಯಂತ ಗೌಡಪ್ಪ ಘುಳಪ್ಪನವರ, ಎ.ಜಿ. ಮುಲ್ಲಾ, ಮಲ್ಲಿಕಾರ್ಜುನ ಮಗದುಮ್, ಗ್ರೇಡ್ ೨ ತಹಸೀಲ್ದಾರ ಮಹಾದೇವ ಬಿರಾದಾರಪಾಟೀಲ,  ಕಂದಾಯ ವೃತ್ತ ನೀರಿಕ್ಷಕ ಶಿವಾನಂದ ಮೆಣಸಂಗಿ, ಡಿ.ವಾಯ್.ಎಸ್ಪಿ. ಎಸ್.ವಿ. ಗಿರೀಶ, ಸಿ.ಪಿ.ಐ ಶಂಕರಗೌಡ ಬಸನಗೌಡರ, ನೀರಾವರಿ ಇಲಾಖೆಯ ಸಿಬ್ಬಂದಿ, ನೋಡಲ್ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಿ.ಡಿ.ಒ ಗಳು, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ  ಸಿಬ್ಬಂದಿ, ಹೆಸ್ಕಾಂ ಸಿಬ್ಬಂದಿ  ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');