ಸಂತ್ರಸ್ತರಿಗೆ ಶಾಸ್ವತ ಪರಿಹಾರ ಕೊಡಿ: ಗಜಾನನ ಮಂಗಸೂಳಿ

0
🌐 Belgaum News :
ಅಥಣಿ: ತಾಲೂಕಿನ ಕೃಷ್ಣಾ ನದಿ ತೀರದ ನೆರೆ ಸಂತ್ರಸ್ತರು ಅತಂತ್ರ ಪರಿಸ್ಥಿತಿ ಅನುಭವಿಸುತ್ತಿದ್ದು ಕೂಡಲೇ ಅವರಿಗೆ ಶಾಸ್ವತ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಗಜಾನನ ಮಂಗಸೂಳಿ ಆಗ್ರಹಿಸಿದರು.ಅಥಣಿ ತಾಲೂಕಿನ ಕಾಂಗ್ರೆಸ್ ಪಕ್ಷದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿ ಮಾತನಾಡಿದ ಅವರು
2005,2018,2019,2021 ರಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುವ ಮೂಲಕ ನದಿ ತೀರದ ಗ್ರಾಮಗಳಾದ ತೀರ್ಥ,ಸಪ್ತಸಾಗರ, ನದಿಇಂಗಳಗಾಂವ,ಹಲ್ಯಾಳ, ದರೂರ,ಖವಟಕೊಪ್ಪ, ಅವರಕೋಡ, ಶೇಗುಣಸಿ, ಪಿ ಕೆ ನಾಗನೂರ,ಸತ್ತಿ,ಸವದಿ,ಜನವಾಡ,ನಂದೇಶ್ವರ ಸೇರಿದಂತೆ ಅಥಣಿ ತಾಲೂಕಿನ ಇಪ್ಪತ್ತೆರಡು ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ನೀರು ನುಗ್ಗುತ್ತಿದ್ದು ಗ್ರಾಮಗಳು ಜಲಾವೃತವಾಗುವ ಮೂಲಕ ಜನರ ಬದುಕು ಭೀಕರವಾಗುತ್ತಿದೆ.
ಕಾಳಜಿ ಕೇಂದ್ರಗಳಲ್ಲಿ ಕಾಟಾಚಾರದ ವ್ಯವಸ್ಥೆ ಮಾಡಿ ಸರ್ಕಾರ ಕೈ ತೊಳೆದುಕೊಳ್ಳುತ್ತಿದ್ದು ಎತ್ತರದ ಸ್ಥಳಗಳಲ್ಲಿ ಇಡೀ ಗ್ರಾಮಗಳನ್ನು ಸ್ಥಳಾಂತರ ಮಾಡುವ ಕೆಲಸ ಆಗಬೇಕಾಗಿದೆ.ಸಂತ್ರಸ್ತರ ಕೂಗನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರ ಕಾಳಜಿ ಮಾಡುವವರೇ ಇಲ್ಲ.ದನಕರುಗಳಿಗೆ ಮೇವು,ಜನರಿಗೆ ಆಹಾರ ಮತ್ತು ಶುದ್ದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.ಅನ್ನ ನೀಡುವ ಕೈಗಳು ಆಹಾರಕ್ಕಾಗಿ ಕೈಚಾಚುವ ಸ್ಥಿತಿ ನಿರ್ಮಾಣವಾಗುವ ಮೊದಲು ನೆರೆ ಸಂತ್ರಸ್ತರಿಗೆ ಶಾಸ್ವತ ನೆರವು ನೀಡದಿದ್ದರೆ.
 ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡುವದಾಗಿ ಗಜಾನನ ಮಂಗಸೂಳಿ ಎಚ್ಚರಿಸಿದ್ದಾರೆ.ಈ ವೇಳೆ ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪುಜಾರಿ, ಬಸವರಾಜ ಬುಟಾಳಿ, ಸುನೀಲ ಸಂಕ, ಸತ್ಯಾಪ್ಪ ಬಾಗೆನ್ನವರ,  ಸುರೇಶಗೌಡ ಪಾಟೀಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');