ಆಗಸ್ಟ್ 10 ರೊಳಗೆ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಕಡ್ಡಾಯ

0
🌐 Belgaum News :

ಬೆಳಗಾವಿ, ಜು.28: ಜಿಲ್ಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಅಂತ್ಯೋದಯ-68908, ಆದ್ಯತಾ -1067855 ಹಾಗೂ ನೋಂದಾಯಿಸಿಕೊಂಡಂತಹ ಆದ್ಯತೇತರ-71859 ಪಡಿತರ ಚೀಟಿಯಲ್ಲಿರುವ ಎಲ್ಲ ಪ್ರತಿಯೊಬ್ಬ ಸದಸ್ಯರು ಆಗಸ್ಟ್. 10 ರೊಳಗಾಗಿ ಅವರ ಪಡಿತರ ಚೀಟಿಯಲ್ಲಿ ನಮೂದಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು.

ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಕಾರರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ನಿಯೋಜಿಸಿದ ಎಲ್ಲ ಪಡಿತರ ಚೀಟಿದಾರರ ಗಮನಕ್ಕೆ ಸದರಿ ವಿಷಯವನ್ನು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರದರ್ಶಿಸಿ ಇ-ಕೆವೈಸಿ ಕಾರ್ಯವನ್ನು ನ್ಯಾಯಬೆಲೆ ಅಂಗಡಿಯ ಲಾಗಿನ್‍ನಲ್ಲಿ ಆಗಸ್ಟ್. 10 ರೊಳಗಾಗಿ ಪೂರ್ಣಗೊಳಿಸಬೇಕು.

ಒಂದು ವೇಳೆ ಪೂರ್ಣಗೊಳಿಸದೆ ಇದ್ದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆಯಲ್ಲಿ ಅಗಸ್ಟ 2021 ನೇ ಮಾಹೆಯಿಂದ ಸರ್ಕಾರವು ಕಡಿತಗೊಳಿಸುತ್ತದೆ.

ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಕಾರರು ಸಂಪೂರ್ಣವಾಗಿ ಎಲ್ಲ ಪಡಿತರ ಚೀಟಿಗಳ ಇ-ಕೆವೈಸಿ ಕಾರ್ಯವನ್ನು ಆಗಸ್ಟ್. 10 ರೊಳಗಾಗಿ ಪೂರ್ಣಗೊಳಿಸಬೇಕು.

ಇಲ್ಲವಾದಲ್ಲಿ ಅಂತಹ ನ್ಯಾಯಬೆಲೆ ಅಂಗಡಿ ಸಂಚಾಲಕರ ಮೇಲೆ ಪಡಿತರ ದೂರುಪಯೋಗ ಕುರಿತು ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');