ಅಡಿಕೆ ಸಮೇತ ಲಾರಿ ಚಾಲಕರು ಪರಾರಿ..!

0
🌐 Belgaum News :

ಮಂಗಳೂರು:  ನಗರದಿಂದ ಗುಜರಾತ್‌ ಗೆ ಲಾರಿಯಲ್ಲಿ ಮೂಲಕ ಸಾಗಾಟ ಮಾಡುತ್ತಿದ್ದ ಸುಮಾರು 2 ಕೋಟಿ ರೂ. ಮೌಲ್ಯದ ಅಡಕೆ ಸಹಿತ ನಾಲ್ವರು ಆರೋಪಿಗಳು ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಬಾವೇಶ್‌ ಕೆ. ಷಾ, ಆಶೀಶ್‌ ಯಾದವ್‌, ಮಹಾರಾಷ್ಟ್ರ ನಾಸಿಕ್‌ ಜೋಷಿ ಟ್ರಾನ್ಸ್‌ಪೋರ್ಟ್‌ ಮಾಲೀಕ ವಿಜಯ್ ಜೋಷಿ  ಪರಾರಿಯಾದ ಆರೋಪಿಗಳು,

ಅದರಂತೆ ಜುಲೈ 19ರಂದು ಬೋಳೂರಿನ ಜಯಲಕ್ಷ್ಮಿ ಟ್ರಾನ್ಸ್‌ಪೋರ್ಟ್‌ ಬುಕಿಂಗ್‌ ಆಫೀಸ್‌ನಿಂದ ಒಂದು ಲಾರಿಯನ್ನು ಗೊತ್ತುಪಡಿಸಿ ಗುಜರಾತಿನ ರಾಜ್‌ಕೋಟ್‌ನಲ್ಲಿರುವ ಸೌತ್‌ ಇಂಡಿಯಾ ಟ್ರಾನ್ಸ್‌ಪೋರ್ಟ್‌ ಬ್ರಾಂಚ್‌ ಆಫೀಸಿಗೆ 291 ಚೀಲ ಅಡಕೆ ತುಂಬಿಸಿ ಕಳುಹಿಸಲಾಗಿತ್ತು.
ಇದಾದ ನಂತರ ಜುಲೈ 20ರಂದು ಇನ್ನೊಂದು ಲಾರಿಯಲ್ಲಿ 301 ಚೀಲ ಅಡಕೆಯನ್ನು ಕೂಡಾ ಕಳುಹಿಸಲಾಗಿತ್ತು. ಈ ಎರಡು ಲಾರಿಗಳು ಜುಲೈ 24ರಂದು ಗುಜರಾತ್‌ ರಾಜ್‌ಕೋಟ್‌ ಸಂಬಂಧಪಟ್ಟ ಬ್ರಾಂಚ್‌ಗೆ ತಲುಪಬೇಕಾಗಿತ್ತು.

ಆದರೆ ಅಲ್ಲಿಗೆ ತಲುಪದೆ ಲಾರಿ ಸಹಿತ ಚಾಲಕರು ನಾಪತ್ತೆಯಾಗಿದ್ದಾರೆ. ಮೊಬೈಲ್‌ ಕೂಡಾ ಸ್ವಿಚ್‌ ಆಫ್‌ ಆಗಿದೆ. ಈ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ಲಾರಿ ಚಾಲಕರು ಮತ್ತು ಟ್ರಾನ್ಸ್‌ಪೋರ್ಟ್‌ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');