ಹಾನಿಗೊಳಗಾಗಿರುವ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ

ಬೆಳಗಾವಿ : ಪ್ರವಾಹದಿಂದಾದ ಹಾನಿ ವೀಕ್ಷಿಸಿದ ರಾಹುಲ್ ಜಾರಕಿಹೊಳಿ

0
🌐 Belgaum News :

 

ಬೆಳಗಾವಿ : ಗೋಕಾಕ: ಪ್ರವಾಹದಿಂದ ಗಿ ಹಾನಿಗೊಳಗಾಗಿರುವ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಸತೀಶ ಅವರು ಮಾಹಿತಿ ಪಡೆದರು. ಪ್ರವಾಹದಿಂದಾಗಿ ಸೇತುವೆ ಕೊಚ್ಚಿ ಹೋಗಿದೆ. ನೀರಿನ ರಭಸಕ್ಕೆ ಸೇತುವೆ ಬಿರುಕು ಬಿಟ್ಟಿದೆ. ನೀರಿನ ಮಟ್ಟ ಇಳಿದ ನಂತರ ಸೇತುವೆಗೆ ಏನಾಗಿದೆ ಎಂದು ಗೊತ್ತಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶಾಶ್ವತ ಪರಿಹಾರ ಕೈಗೊಳ್ಳಿ:

ಪ್ರತಿ ಬಾರಿ ಪ್ರವಾಹ ಉಂಟಾದಾಗಲು ಸೇತುವೆ ಮುಳುಗಡೆಯಾಗುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ತೀರ್ಮಾನ ಕೈಗೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಸತೀಶ ಜಾರಕಿಹೊಳಿ ಸೂಚಿಸಿದರು.

ಸಂಪೂರ್ಣ ಜಲಾವೃತ:

ಕಳೆದ ವಾರದ ಹಿಂದೆ ಪ್ರವಾಹ ಹಾಗೂ ಮಳೆಯಿಂದಾಗಿ ಲೋಳಸೂರ ಸೇತುವೆ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿದೆ. ಘಟಪ್ರಭಾ ನದಿಗೆ ಹಿರಣ್ಯಕೇಶಿ, ಮಾರ್ಕಂಡೇಯ ನದಿ ಮತ್ತು ಬಳ್ಳಾರಿ ನಾಲೆಯಿಂದ ಹಾಗೂ ಹಿಡಕಲ್ ಜಲಾಶಯದಿಂದ ಬಿಡಲಾಗಿದ್ದ ನೀರಿನಿಂದ ಸೇತುವೆ ಮುಳುಗಡೆಗೊಂಡಿದ್ದು, ಕಳೆದ 4 ದಿನಗಳಿಂದ ಮಳೆಯ ಪ್ರಮಾಣ ತಗ್ಗಿದ್ದರಿಂದ ನೀರಿನ ಮಟ್ಟ ಇಳಿಮುಖವಾಗಿದೆ.

ಮತ್ತೊಂದು ಸೇತುವೆ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿ:

ನೀರಿನ ಪ್ರಮಾಣ ಕಡಿಮೆಯಾದರೆ ಕೆಳಗಿನ ಸೇತುವೆಯ ಮೂಲಕ ಸಂಚಾರಕ್ಕೆ ಅನುಕೂಲ ಕಲ್ಪಿಸಿ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಳಗಿನ ಸೇತುವೆಯ ಮೂಲಕ ಬೈಪಾಸ್ ರಸ್ತೆ ನಿರ್ಮಿಸಿ ಎಂದು ಸತೀಶ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ವೈ. ಪವಾರ, ಚಿಕ್ಕೋಡಿ ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್. ಪಾಟೀಲ, ಗೋಕಾಕ ಎಇಇ ಕೆ.ಪಿ. ನಾಗಾಭರಣ, ಗುತ್ತಿಗೆದಾರ ಬಸವಂತ ದಾಸನವರ, ಮುಖಂಡರಾದ ವಿವೇಕ ಜತ್ತಿ, ಶಿವು ಕಿಲಾರಿ, ರಿಯಾಜ್ ಚೌಗಲಾ, ಬಸವರಾಜ ಕೊಳಚಿ ಸೇರಿ ಇನ್ನಿತರರು ಇದ್ದರು./////

ಬೆಳಗಾವಿ : ಪ್ರವಾಹದಿಂದಾದ ಹಾನಿ ವೀಕ್ಷಿಸಿದ ರಾಹುಲ್ ಜಾರಕಿಹೊಳಿ

ಬೆಳಗಾವಿ :  ಹುಕ್ಕೇರಿ : ಹುಕ್ಕೇರಿ ತಾಲ್ಲೂಕಿನ ಕುಂದರಗಿ ಹಾಗೂ ಬೆಳಗಾವಿ ತಾಲ್ಲೂಕಿನ ಹುದಲಿ, ತುಮ್ಮರಗುದ್ದಿ, ಮುಚ್ಚಂಡಿ, ಅಂಕಲಗಿ, ಡುಮ್ಮುಉರಬನಟ್ಟಿ, ಕಲಕಾಂಬ, ಖನಗಾಂವ ಸೇರಿದಂತೆ ವಿವಿಧ ಗ್ರಾಮಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಇಂದು ತೆರಳಿ ಪ್ರವಾಹ ಹಾಗೂ ಮಳೆಯಿಂದಾದ ಹಾನಿಯನ್ನು ಪರಿಶೀಲಿಸಿದರು.

ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿದ ರಾಹುಲ್ ಜಾರಕಿಹೊಳಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳುವ ಮೂಲಕ  ಪರಿಹಾರ ಕೊಡಿಸುವ ಭರವಸೆ ನೀಡಿದರು.

ಗ್ರಾಮದಲ್ಲಿ ಆಗಿರುವ ಹಾನಿಯನ್ನು ವೀಕ್ಷಣೆ ಮಾಡಿದ್ದೇನೆ. ಕೆಲವು ಮಾಹಿತಿಯನ್ನು  ಗ್ರಾಮದ ಮುಖಂಡರಿಂದ ಪಡೆದುಕೊಂಡಿದ್ದೇನೆ. ಎಲ್ಲವನ್ನೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಿ, ಸಂತ್ರಸ್ತರಿಗೆ ಪರಿಹಾರ ಕೊಡಿಸಲಾಗುವುದು ಎಂದು ಹೇಳಿದರು.

ಕುಂದರಗಿಯ ಅಡವಿಸಿದ್ಧೇಶ್ವರ ಮಠದ ಅಮರೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. ಮಳೆಯಿಂದಾಗಿ ಮಠದ ಆವರಣದಲ್ಲಿ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿ, ಸ್ವಾಮೀಜಿಗಳಿಂದ ಮಾಹಿತಿ ಪಡೆದರು.

ಅರವಿಂದ ಕಾರಚಿ, ಅಲ್ಲಾಖಾನ ಅಳ್ಳಿಕಟ್ಟಿ, ಸಿಂಧೂರ ಮಾಸ್ತಮರ್ಡಿ, ಮಲ್ಲಿಕ್ ದೇಸಾಯಿ, ರಶೀದ್ ಅರಳಿಕಟ್ಟಿ, ಮಲ್ಲಿಕ್ ಮಾದರ ಸೇರಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');