ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ 60ಕ್ಕೂ ಹೆಚ್ಚು ಮಂಗಗಳನ್ನು ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಕಟ್ಟಿ ರಸ್ತೆ ಬದಿ ಎಸೆದ ದುಷ್ಕರ್ಮಿಗಳು

0
🌐 Belgaum News :

ಹಾಸನ: ವಿಷಾಹಾರ ಸೇವಿಸಿದ ಸುಮಾರು 60ಕ್ಕೂ ಹೆಚ್ಚು ಮಂಗಗಳನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿ ರಸ್ತೆ ಬದಿ ಎಸೆದಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಸಕಲೇಶಪುರದ ಬೇಗೂರು ಕ್ರಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಚೀಲಗಳಲ್ಲಿ ಮಂಗಗಳನ್ನು ಕಟ್ಟಿ ರಸ್ತೆ ಬದಿಗೆ ಎಸೆಯಲಾಗಿದೆ. ದಾರಿಹೋಕರು ಇದನ್ನು ನೋಡಿ ಚೀಲಗಳನ್ನು ಬಿಚ್ಚಿದ್ದು ಈ ವೇಳೆ ಮಂಗಗಳಿಗೆ ವಿಷಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮಂಗಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ 60 ಮಂಗಗಳ ಪೈಕಿ ಕೇವಲ 14 ಮಂಗಗಳನ್ನು ಮಾತ್ರ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಮೃತ ಮಂಗಗಳ ಅಂತ್ಯಸಂಸ್ಕಾರಕ್ಕೂ ಸಿದ್ಧತೆ ನಡೆಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');