ಪ್ರವಾಹ : ಶಾಶ್ವತ ಪುನರ್ವಸತಿ, ಬೆಳೆ ಪರಿಹಾರಕ್ಕೆ ಆಗ್ರಹ

0
🌐 Belgaum News :

ಚಿಕ್ಕೋಡಿ : ಪ್ರತಿ ವರ್ಷ ನದಿಗಳು ತುಂಬಿ ಹರಿದು ಮುಳುಗಡೆಯಾಗುತ್ತಿರುವ ನದಿ ತೀರದ ಗ್ರಾಮಗಳ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಜತೆಗೆ ಬಿದ್ದಿರುವ ಮನೆ ಮತ್ತು ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ಕೊಡುವಂತೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಗುರುವಾರ ಉಪವಿಭಾಗಾಧಿಕಾರಿ ಯುಕೇಶಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಬಾರಿ ಮಳೆಯಿಂದ ಕೃಷ್ಣಾ ನದಿ ಸೇರಿದಂತೆ ಉಪನದಿಗಳಾದ ವೇದಗಂಗಾ, ದೂಧಗಂಗಾ, ಪಂಚಗಂಗಾ ನದಿಗಳು ತುಂಬಿ ಅಪಾಯಮಟ್ಟ ಮೀರಿ ನೀರು ಹರಿಯುತ್ತಿರುವದರಿಂದ ನದಿ ತೀರದ ಜನರು ತಮ್ಮ ಹೊಲ ಮನೆ ಎಲ್ಲವನ್ನು ಬಿಟ್ಟು ಚಿಕ್ಕ ಚಿಕ್ಕ ಮಕ್ಕಳನ್ನು ವಯೋವೃದ್ಧರನ್ನು ಮತ್ತು ಜಾನುವಾರುಗಳೊಂದಿಗೆ ಉಟ್ಟಭಟ್ಟೆಯ ಮೇಲೆ ಬಂದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಆದ್ದರಿಂದ ಪ್ರತಿ ವರ್ಷ ಪ್ರವಾಹದ ಬೀತಿ ಎದುರಿಸುತ್ತಿರುವ ನದಿ ತೀರದ ಗ್ರಾಮಗಳ ಜನರನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಮುಖಾಂತರ ಶಾಶ್ವತ ಪರಿಹಾರ ದೊರಕಿಸಿಕೊಡಲು ಆಡಳಿತ ಯಂತ್ರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಎಸ್.ವೈ.ಹಂಜಿ, ತುಕಾರಾಮ ಕೋಳಿ, ಸುರೇಶ ಬ್ಯಾಕೂಡೆ, ಅರ್ಜುನ ಚನ್ನವರ ಮುಂತಾದವರು ಉಪಸ್ಥಿತರಿದ್ದರು.///

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');