ರಾಯಭಾಗ ಶಾಸಕರ ಧುರ್ಯೋಧನ ಐಹೊಳೆಗೆ ಮಂತ್ರಿಗಿರಿ ಕೊಡಿ: ರಾಜೇಂದ್ರ ಐಹೊಳೆ

0
🌐 Belgaum News :
ಮಾದಿಗ ಮೀಸಲಾತಿ ಹೋರಾಟ ಸಮೀತಿಯ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಐಹೊಳೆ ಬೆಳಗಾವಿ ಜಿಲ್ಲೆಯ ಮಾದಿಗ ಮೀಸಲಾತಿ ಹೋರಾಟ ಸಮೀತಿಯಿಂದ ಸುಮಾರು ಒಂದು ವಾರದಿಂದ 2019 ರಲ್ಲಿ ಬಿ ಎಸ್ ವೈ ಮುಖ್ಯಮಂತ್ರಿ ಆಗಿದ್ದರು ಅವರು ದಲಿತ ಮುಖ್ಯ ಮಂತ್ರಿ ಭರವಸೆ ಇಟ್ಟಿದ್ದು ಬಸವರಾಜ ಬೊಮ್ಮಾಯಿ ಅವರನ್ನು ಸಿ ಎಮ್ ಮಾಡಿದ್ದು ಬಿಜೆಪಿ ದಲಿತರನ್ನು ಕಡೆಗಣಿಸಿದೆ.ದಲಿತರ ಹಿಂದುಳಿದ ಜನರ ಧೀಮಂತ ನಾಯಕ ಗೊವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ.
ಆದರೆ ಸಾಮಾಜಿಕ ನ್ಯಾಯ ನೋಡಿದಾಗ ಅತಿಹೆಚ್ಚು ಜನ ಇರುವ ದಲಿತರಿಗೆ ಹೆಚ್ಚಿನ ನ್ಯಾಯ ಕೊಡಲು ಸರ್ಕಾರ ವಿಫಲವಾಗಿದ್ದು ಮೂರು ಬಾರಿ ಆಯ್ಕೆ ಆಗಿರುವ ಹಿಂದುಳಿದ ವರ್ಗದ ರಾಯಭಾಗ ಶಾಸಕ ಡಿ ಎಮ್ ಐಹೊಳೆ ಅವರಿಗೆ ಮಂತ್ರಿಗಿರಿ ಕೊಡಬೇಕು.ಉತ್ತರ ಕರ್ನಾಟಕದಲ್ಲಿ ಮಾದಿಗ ಸಮಾಜ ಬೆಂಬಲಿಸಿದ್ದರಿಂದ ಬಿಜೆಪಿ ಶಾಸಕರು ಆಯ್ಕೆ ಆಗಿದ್ದಾರೆ.ಸಾಮಾಜಿಕ ನ್ಯಾಯಕ್ಕಾಗಿ ಡಿ ಎಮ್ ಐಹೊಳೆ ಅವರನ್ನು ಮಂತ್ರಿ ಮಾಡುವಂತೆ ನಳೀನಕುಮಾರ್ ಕಟೀಲ,ಜೇ ಪಿ ನಡ್ಡಾ ಮತ್ತು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ ಎಂದರು.
ಈ ವೇಳೆ ಮಾತನಾಡಿದ ಗುತ್ತಿಗೆದಾರ ಹಾಗೂ ಮಾದಿಗ ಸಮಾಜದ ಮುಖಂಡ ಸಂಗಪ್ಪ ಮಾಯನಟ್ಟಿ ಕಳೆದ ಮೂರು ಚುನಾವಣೆಗಳಲ್ಲಿ  ರಾಯಭಾಗ ಮತಕ್ಷೇತ್ರದಿಂದ ಅತಿಹೆಚ್ಚು ಮತಗಳಿಂದ ಆಯ್ಕೆ ಆದ ಡಿ ಎಮ್ ಐಹೊಳೆ ಅವರು ಜನಪರ ಕಾಳಜಿ ಹೊಂದಿದ ಶಾಸಕರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವದರಿಂದ ಅವರಿಗೆ ಮಂತ್ರಿಗಿರಿ ನೀಡಿದರೆ ಹಿಂದುಳಿದ ವರ್ಗದ ಜನರ ಏಳಿಗಗೆ ಸಹಕಾರಿಯಾಗುತ್ತದೆ ಎಂದರು.
ಈ ವೇಳೆ ಹಣಮಂತ ಅರ್ದಾವುರ,ವಿಠ್ಠಲ ಅವಳೆ,ಪ್ರಕಾಶ ಹೆಗ್ಗಣ್ಣವರ,ಮಹದೇವ ಮಾದಿ,ಹನಮಂತ ಅರ್ದೂರ,ಅಜಯ ಧೋಳಗಾಂವಿ,ಮಹಾವೀರ ಆಚಾರಟ್ಟಿ,ಮುತ್ತಪ್ಪ ಜಮಖಂಡಿ, ಮಹಾವೀರ ಮಾದರ,ಚನ್ನಪ್ಪಾ ಜಗದಾಳೆ,ಬಸವರಾಜ ಹೋಳಿಕಟ್ಟಿ,ರಮೇಶ ಮಾದರ,ಆನಂದ ದೇವರಮನಿ ಮತ್ತು ಲಕ್ಷ್ಮಣ ಅವಳೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');