ಪ್ರವಾಹ ಸಂತ್ರಸ್ಥರ ನೆರವಿಗೆ ನಿಂತ ಜನಸೇವಕ : ಶಿವಬಸು ನಾಯಿಕ

0
🌐 Belgaum News :
ಅಥಣಿ: ತಾಲೂಕಿನ ನಾಗನೂರ ಪಿ.ಕೆ.ಗ್ರಾಮದಲ್ಲಿ ಒಬ್ಬ ಮನುಷ್ಯ ದೊಡ್ಡ ವ್ಯಕ್ತಿಯಾಗಿ ಬೆಳೆಯಬೇಕಾದರೆ ಅವನ ಹತ್ತಿರ ಬರಿ ಹಣವಿದ್ದರೆ ಸಾಲದು ಆ ಹಣವನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸುವ ಮನಸ್ಸಿರಬೇಕು ಆವಾಗ ಮಾತ್ರ ಆ ಮನುಷ್ಯ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ ಎಂಬುದಕ್ಕೆ
ಅಥಣಿ ತಾಲೂಕಿನ ಅವರಖೋಡ ಗ್ರಾಮದ  ಶಿವಬಸು ನಾಯಿಕ ಅವರೇ ಸಾಕ್ಷಿ. ಸದಾ ಬಡವರ ಹಿತವನ್ನು ಬಯಸುವ ಇವರು ಕೊರೊನಾ ೨ ನೇ ಅಲೆಯಲ್ಲಿ ತಮ್ಮ ರಾಷ್ಟ್ರೋತ್ಥಾನ ಶಾಲೆಯನ್ನು ಕೊವಿಡ್ ಕೇರ್ ಸೆಂಟರ ಆಗಿ ಮಾಡಿ ತಮ್ಮ ಜೀವದ ಹಂಗು ತೊರೆದು ಹಗಲಿರುಳೆನ್ನದೆ ಕೊರೊನಾ ರೋಗಿಗಳ ಸೇವೆಯಲ್ಲಿ ತೊಡಗಿ ಅವರ ಜೀವ ಕಾಪಾಡಿ ರೋಗಿಗಳ ಪಾಲಿನ ದೇವತಾ ಮನುಷ್ಯ ಅನ್ನಿಸಿಕೊಂಡಿದ್ದರು. ಇದೀಗ ಪ್ರವಾಹ ಪೀಡಿತರ ನೆರವಿಗೆ ಮುಂದಾಗಿದ್ದಾರೆ.
ಕಳೆದ ಒಂದು ವಾರದಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಮಳೆಯಾಗಿ ಕೃಷ್ಣಾ ನದಿಯ ದಡದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಅಥಣಿ ತಾಲೂಕಿನ ಅನೇಕ ಗ್ರಾಮಗಳ ಜನರು ತಮ್ಮ ಮನೆ, ಮಠ, ಮತ್ತು ಜಾನುವಾರುಗಳನ್ನು ಬಿಟ್ಟು ಬೀದಿಗೆ ಬಂದಿದ್ದು ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರವಾಹ ಪೀಡಿತರ ನೆರವಿಗೆ ಬಂದ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಸಹನಾ ಮೂರ್ತಿ, ಬಡವರ ಬಂಧು, ಕೊಡುಗೈ ದಾನಿಯಾದ  ಶಿವಬಸು ನಾಯಿಕ ಅವರು ತಮ್ಮ ರಾಷ್ಟ್ರೋತ್ಥಾನ ಶಾಲೆಯನ್ನು ಕಾಳಜಿ ಕೇಂದ್ರವನ್ನಾಗಿ ಮಾಡಿದ್ದು ಅವರಖೋಡ ಸುತ್ತಮುತ್ತಲಿನ ಅನೇಕ ನೆರೆ ಸಂತ್ರಸ್ಥ ಗ್ರಾಮಗಳಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ
ಪ್ರಾಯೋಗಿಕವಾಗಿ  ತಾಲೂಕಿನ ಜನವಾಡ, ಮಹಿಷವಾಡಗಿ, ನಂದೇಶ್ವರ,ಗ್ರಾಮಗಳ ನಿರಾಶ್ರಿತ ಕೇಂದ್ರಗಳಿಗೆ ಭೇಟ್ಟಿ ನೀಡಿ ಅನ್ನ ಸಂತರ್ಪಣೆ ಮಾಡಿದರು. ದಾನಗಳಲ್ಲಿ ಶ್ರೇಷ್ಠ ದಾನ ಅನ್ನದಾನ ಎನ್ನುವಂತೆ ಊಟ ಮಾಡಿದ ಜನ ಅವರಿಗೆ ಮನಪೂರ್ವಕ ಹರಸಿದರು. ಇದೇ ಸಂದರ್ಭದಲ್ಲಿ ಅವರ ಧರ್ಮ ಪತ್ನಿಯಾದ ಮಾಲತಿ ಶಿವಬಸು ನಾಯಿಕ ಅವರು ಇವರಿಗೆ ಜೊತೆಯಾದರು. ಸದಾ ಒಂದಲ್ಲ ಒಂದು ಸಮಾಜಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಈ ದಂಪತಿಗಳ ಕಾರ್ಯ ತುಂಬಾ ಶ್ಲಾಘನೀಯವಾದದ್ದು
ಅನ್ನ ಸಂತರ್ಪಣೆ ಸಮಯದಲ್ಲಿ  ಗ್ರಾಮದ ಹಿರಿಯರಾದ ಜಡೆಪ್ಪಾ ಕುಂಬಾರ,ದಶರಥ ಸಾಳುಂಕೆ, ಶ್ರೀಕಾಂತ ದರೂರ, ದಶರಥ ಅಂಬಿ, ಶ್ರೀಶೈಲ ಹಾವರಡ್ಡಿ, ಆನಂದ ಖೋತ,  ದಶರಥ ಕಾಂಬಳೆ, ರಾಮ ಬಿಳ್ಳೂರ, ಅಶೋಕ ಬಳ್ಳಿಗೇರಿ, ತಾನಾಜಿ ಮೋರೆ, ಶಿವಶಂಕರ ನಾಯಿಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');