ಬೆಳಗಾವಿ ಬಳಿ ರೈಲಿಗೆ ತಲೆ ಕೊಟ್ಟು ವೃದ್ಧ ಆತ್ಮಹತ್ಯೆ

0
🌐 Belgaum News :

ಬೆಳಗಾವಿ ಹಳೇ ಗಾಂಧಿನಗರ ಬಳಿ ರೈಲ್ವೆ ಹಳಿಯ ಮೇಲೆ ವೃದ್ಧನೊಬ್ಬ ರೈಲಿಗೆ ತಲೆ ಕೊಟ್ಟು ಗುರುವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗಾವಿ ಹಳೇ ಗಾಂಧಿನಗರ ಹೈವೇ ಸೇತುವೆ ಬಳಿಯ ರೈಲ್ವೆ ಹಳಿಯ ಸಮೀಪ ವೃದ್ಧ ಬೆಳಗ್ಗೆಯಿಂದ ಕುಳಿತಿದ್ದ. ಮಧ್ಯಾಹ್ನ 3.15ರ ವೇಳೆಗೆ ಬೆಳಗಾವಿ ಶೇಡಬಾಳ ರೈಲು ಸಾಂಬ್ರಾ ಕಡೆಯಿಂದ ಬರುತ್ತಿದ್ದಂತೆಯೇ ರೈಲ್ವೆ ಹಳಿಯ ಮೇಲೆ ಜಿಗಿದ. ರೈಲು ಹಳಿಯ ಮೇಲಿಂದ ಹಾದು ಹೋದಾಗ ವೃದ್ಧನ ಕೈ ತುಂಡರಿಸಿ ರೈಲ್ವೆ ಹಳಿಯ ಮೇಲೆ ಬಿದ್ದಿತು ಎಂದು ಸ್ಥಳೀಯರು ಮಾಹಿತಿ ನೀಡಿದರು.

ರೈಲ್ವೆ ಪೊಲೀಸ್ ಪಿಎಸ್‍ಐ ಶ್ರೀರಾಮುಲು ವಿನೋದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');