ಎಲ್ಲ ದಾನಗಳಲ್ಲಿ ಅನ್ನ ದಾನ ಶ್ರೇಷ್ಠ ದರೆಪ್ಪಾ ಠಕ್ಕನ್ನವರ

0
🌐 Belgaum News :

 

ಅಥಣಿ:     ಎಲ್ಲ ದಾನಗಳಲ್ಲಿ ಅನ್ನ ದಾನ ಶ್ರೇಷ್ಠ ಕಾರ್ಯವಾಗಿದೆ. ಹಸಿದ ಹೊಟ್ಟೆಗೆ ಅನ್ನ ದೊರೆತರೆ ಅದರಿಂದ ದೊರೆಯುವ ಆನಂದ ಬೇರೆ ಯಾವುದರಿಂದಲೂ ದೊರೆಯಲು ಸಾಧ್ಯವಿಲ್ಲವೆಂದು ರಾಣಿ ಚನ್ನಮ್ಮ ಶಿಕ್ಷಣ ಹಾಗೂ ಗ್ರಾಮೀಣಾಿವೃದ್ಧಿ ಸಂಘದ ಅಧ್ಯಕ್ಷ ಧರೆಪ್ಪ ಶಿವಪ್ಪ ಠಕ್ಕನ್ನವರ ಹೇಳಿದರು.

ಗ್ರಾಮದ ಝಿರೋಪಯಿಂಟ ಕಾಳಜಿ ಕೇಂದ್ರದಲ್ಲಿ ವಾಸವಿರುವ ಪ್ರವಾಹ ಸಂತ್ರಸ್ತರಿಗೆ ಗುರುವಾರ ಸಂಜೆ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಿ ಮಾನವೀಯತೆ ತೋರುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.

ಮಾನವರಾಗಿ ಜನಿಸಿದ ಮೇಲೆ ನಾಲ್ಕು ಜನರಿಗೆ ಉಪಯೋಗವಾಗುವ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದ ಅವರು ಇಂದು ಹಲ್ಯಾಳ, ಅವರಖೋಡ, ಸತ್ತಿ, ರಡ್ಡೆರಹಟ್ಟಿ, ಸವದಿ ದರ್ಗಾ, ಜನವಾಡ ಗ್ರಾಮಗಳ ಪ್ರವಾಹ ಸಂತ್ರಸ್ತರಿಗೆ ವಾಹನದಲ್ಲಿಯೇ ಬಿಸಿಯೂಟ ತಯಾರಿಸಿ ಅದರಲ್ಲಿ ಬಾಳೆಹಣ್ಣು ನೀಡಿ ಕೊಡಲಾಗುತ್ತಿದೆ.

ಬಿಸಿಯಾದ ಅಡುಗೆ ಇರುವುದರಿಂದ ಪ್ರವಾಹ ಸಂತ್ರಸ್ತರು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಯುವ ಮುಖಂಡ ನಿಶಾಂತ ದಳವಾಯಿ, ಮಲ್ಲುಗೌಡ ಪಾಟೀಲ, ಮಲ್ಲು ನಡುವಿನಮನಿ, ಚಿದು ಮುಕಣಿ, ಜಾವೇದ ಸನದಿ, ಶ್ರೀಕಾಂತ ದರೂರ, ಬಸು ಬಂಗಿ, ಸಂತೋಷ ಗಾಳಿ, ಕುಮಾರ ಬಿಳ್ಳೂರ, ಬಸು ಸೋಣಕರ, ವಿನಾಯಕ ಬ್ಯಾಳಿಗೌಡರ ಹಾಗೂ ಇತರರು ಉಪ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');