ಸುರಪುರ : ವಿವಿಧ ಗ್ರಾಮಗಳ ಪ್ರವಾಹ ಸ್ಥಳಕ್ಕೆ ತಹಸೀಲ್ದಾರ್ ಸುಬ್ಬಣ್ಣ ಭೇಟಿ

0
🌐 Belgaum News :

ಸುರಪುರ: ಕೃಷ್ಣಾ ನದಿಗೆ ೪ ಲಕ್ಷ ಕ್ಯೂಸೆಕ್‌ಗಿಂತಲು ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನಲೆಯಲ್ಲಿ ತಾಲೂಕಿನ ಎಲ್ಲಾ ನದಿಪಾತ್ರದ ಗ್ರಾಮಗಳ ಸಾವಿರಾರು ಎಕರೆ ಜಮೀನುಗಳು ಮುಳುಗಡೆಯಾಗಿದ್ದು ಸ್ಥಳಕ್ಕೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ದೇವಾಪುರ ಗ್ರಾಮದ ಹಳ್ಳದ ದಡದಲ್ಲಿನ  ನೂರಾರು ಎಕರೆಯಲ್ಲಿ ಬೆಳೆದ ಭತ್ತ ಹತ್ತಿ ತೊಗರಿ ಹಾಗು ದಾಳಿಂಬೆ ಬೆಳೆ ಸಂಪೂರ್ಣ ಜಲಾವೃತಗೊಂಡಿದ್ದು ರೈತರು ಕಣ್ಣೀರು ಸುರಿಸುವಂತಾಗಿದೆ.ಅಲ್ಲದೆ ಇನ್ನು ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಸಾಧ್ಯತೆ ಇರುವುದರಿಂದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ.ಸಾಲಶೂಲ ಮಾಡಿ ವ್ಯವಸಾಯ ಮಾಡಿದ್ದ ರೈತರಿಗೆ ಈಗ ಕಣ್ಣೀರೆ ಗತಿಯಾಗಿದೆ.

ತಾಲೂಕಿನ ಶೆಳ್ಳಗಿ ಗ್ರಾಮಕ್ಕೆ ಶುಕ್ರವಾರ ಮದ್ಹಾö್ಯನ ಭೇಟಿ ನೀಡಿದ ತಹಸೀಲ್ದಾರರು ಪ್ರವಾಹ ಪರಸ್ಥಿತಿಯನ್ನು ವೀಕ್ಷಿಸಿದರು.ಸುರಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್‌ವೆಲ್ ಮುಳುಗಡೆಯಾಗಿದೆ,ಅಲ್ಲದೆ ಕೃಷ್ಣಾ ನದಿ ದಡದಲ್ಲಿರುವ ಬಲಭೀಮೇಶ್ವರ ದೇವಸ್ಥಾನಕ್ಕೂ ನೀರು ನುಗ್ಗಿದೆ.ಇದೆಲ್ಲವನ್ನು ವೀಕ್ಷಣೆ ಮಾಡಿದ ತಹಸೀಲ್ದಾರರು ಪ್ರವಾಹದಿಂದ ಉಂಟಾಗಿರುವ ಬೆಳೆ ನಷ್ಟದ ಕುರಿತು ಶೀಘ್ರದಲ್ಲಿಯೆ ವರದಿ ತಯಾರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ವಿಠ್ಠಲ್ ಬಂದಾಳ,ಉಪ ತಹಸೀಲ್ದಾರ್ ರೇವಪ್ಪ ತೆಗ್ಗಿನ,ಕಂದಾಯ ನಿರೀಕ್ಷಕ ವಿಠ್ಠಲ್ ಬಂದಾಳ,ವಿಎ ರವಿ ಒ.ಹೆಚ್ ಹಾಗು ಭೀಮು ಯಾದವ್ ಸೇರಿದಂತೆ ಇತರರಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');